Advertisement

ರಜನಿಕಾಂತ್‌ ನನಗೆ ಚಿಕ್ಕಪ್ಪ ಇದ್ದಂತೆ: ಶಿವಣ್ಣ

02:37 PM Jul 31, 2023 | Team Udayavani |

ರಜನಿಕಾಂತ್‌ ನನಗೆ ಚಿಕ್ಕಪ್ಪ ಇದ್ದಂತೆ ಎಂದು ನಟ ಶಿವರಾಜ್‌ಕುಮಾರ್‌ ಹೇಳಿದ್ದಾರೆ. “ಜೈಲರ್‌’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ, ಒಂದು ದಿನ ನಾನು ತಂದೆ ಜೊತೆ ಶಬರಿಮಲೆಗೆ ಹೋಗಿದ್ದಾಗ ನಾನು ರಜನಿ ಅವರ ಕೈ ಹಿಡಿದು ಹೆಜ್ಜೆ ಹಾಕಿದ್ದೆ. ಅವರು ನನಗೆ ಚಿಕ್ಕಪ್ಪ ಇದ್ದಂತೆ’ ಎಂದು ಹೇಳಿದ್ದಾರೆ. ಈ ವೇಳೆ ರಜನಿಕಾಂತ್‌ ಬಂದು ಶಿವಣ್ಣ ತಬ್ಬಿಕೊಂಡು ಸಂತಸ ವ್ಯಕ್ತಪಡಿಸಿದರು.

Advertisement

“ನಾನು ಹುಟ್ಟಿ, ಬೆಳೆದಿದ್ದು ಇಲ್ಲೇ. ಇಲ್ಲಿ ನನಗೆ ತುಂಬಾ ಜನ ಸ್ನೇಹಿತರಿದ್ದಾರೆ. ಜೈಲರ್‌ ಚಿತ್ರದಲ್ಲಿ ನನ್ನದು ಸಣ್ಣ ಪಾತ್ರ. ರಜನಿಕಾಂತ್‌ ಅವರ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆ’ ಎಂದರು.

ರಜನಿಕಾಂತ್‌ ನಟನೆಯ “ಜೈಲರ್‌’ ಚಿತ್ರ ಆಗಸ್ಟ್‌  10ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಶಿವಣ್ಣ ಕೂಡಾ ನಟಿಸಿದ್ದಾರೆ. ಇದಲ್ಲದೇ ತಮಿಳಿನ ಧನುಶ್‌ ನಟನೆಯ ಕ್ಯಾಪ್ಟನ್‌ ಮಿಲ್ಲರ್‌ ಚಿತ್ರದಲ್ಲಿ ಧನುಶ್‌ ಅಣ್ಣನಾಗಿ ಶಿವಣ್ಣ ಪಾತ್ರ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next