Advertisement

Rajinikanth: ʼಜೈಲರ್ʼ ಹಾಡಿನಿಂದ ಧೂಳೆಬ್ಬಿಸಿ ಮಾಲ್ಡೀವ್ಸ್ ಗೆ ಹಾರಿದ ರಜಿನಿ; ಫೋಟೋ ವೈರಲ್

10:01 AM Jul 18, 2023 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ʼಜೈಲರ್‌ʼ ಸಿನಿಮಾದ ಹಾಡುಗಳು ಧೂಳೆಬ್ಬಿಸಿದೆ. ತಮನ್ನಾ ಅವರು ಹೆಜ್ಜೆ ಹಾಕಿರುವ ʼಕಾವಾಲಾʼ ಹಾಡಿನ ಗುಂಗಿನಲ್ಲಿರುವಾಗಲೇ ಸಿನಿಮಾದ ಎರಡನೇ ಹಾಡು ʼಹುಕುಂʼ ರಿಲೀಸ್‌ ಆಗಿ ಕಿಕ್‌ ಕೊಟ್ಟಿದೆ.

Advertisement

ಕಳೆದ ಕೆಲ ಸಮಯದಿಂದ ಶೂಟಿಂಗ್‌ ನಲ್ಲಿ ಬ್ಯುಸಿಯಾಗಿದ್ದ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಈಗ ರಿಲ್ಯಾಕ್ಸ್‌ ಮೂಡ್‌ ನಲ್ಲಿರುವ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಅನಿರುದ್ಧ್ ರವಿಚಂದರ್‌ ಮ್ಯೂಸಿಕ್‌ ನೀಡಿರುವ ʼಜೈಲರ್‌ʼ ಸಿನಿಮಾದ ಹಾಡುಗಳು ಪ್ರೇಕ್ಷಕರ ಮನಗೆದ್ದಿದೆ. ʼಹುಕುಂʼ ಹಾಡಿನಲ್ಲಿ ರಜಿನಿ ಅವರ ಲುಕ್‌ & ಖದರ್‌ ನೋಡಿ ಫ್ಯಾನ್ಸ್‌ ಗಳು ಫಿದಾ ಆಗಿದ್ದಾರೆ. ಈ ಹಾಡು ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಭರ್ಜರಿ ವೀಕ್ಷಣೆ ಕಂಡು ಟ್ರೆಂಡ್‌ ಸೃಷ್ಟಿಸಿದೆ.

ಇತ್ತೀಚೆಗಷ್ಟೇ ರಜಿನಿಕಾಂತ್‌ ಮಗಳು ಐಶ್ವರ್ಯಾ ಅವರ ‘ಲಾಲ್ ಸಲಾಂ’ ಚಿತ್ರದ ಶೂಟಿಂಗ್‌ ಮುಗಿಸಿದ್ದಾರೆ. ಕಳೆದ ಕೆಲ ಸಮಯದಿಂದ ಶೂಟ್‌ ನಲ್ಲೇ ಬ್ಯುಸಿಯಾಗಿದ್ದ ಅವರೀಗ ರಿಲ್ಯಾಕ್ಸ್‌ ಮೂಡ್‌ ನಲ್ಲಿದ್ದಾರೆ.

ಮಾಲ್ಡೀವ್ಸ್ ಬೀಚ್‌ ನಲ್ಲಿ ರಜಿನಿಕಾಂತ್‌ ನಡೆದುಕೊಂಡು ಹೋಗುತ್ತಿರುವ ಫೋಟೋ ವೈರಲ್‌ ಆಗಿದೆ. ಅವರು ಕೆಂಪು ಟೀ ಶರ್ಟ್ ಮತ್ತು ಕಡು ನೀಲಿ ಬಣ್ಣದ ಶಾರ್ಟ್ಸ್ ಜೊತೆಗೆ ಸೊಂಟಕ್ಕೆ ಅಡ್ಡ ಬ್ಯಾಗ್ ವೊಂದನ್ನು ಕಟ್ಟಿಕೊಂಡಿರುವುದು ಚಿತ್ರದಲ್ಲಿ ಕಾಣಬಹುದು.

Advertisement

ನೆಲ್ಸಾನ್‌ ಅವರ ʼಜೈಲರ್‌ʼ ಸಿನಿಮಾ ಆಗಸ್ಟ್‌ 10 ರಂದು ತೆರೆಗೆ ಬರಲಿದೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮತ್ತು ಕನ್ನಡದ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ, ವಿನಾಯಕನ್ ಮುಂತಾದವರು ನಟಿಸಿದ್ದಾರೆ.

ಇದಾದ ಬಳಿಕ ಅವರ ʼಲಾಲ್‌ ಸಲಾಂʼ ತೆರೆಗೆ ಬರಲಿದೆ. ಆದಾದ ನಂತರ ಲೋಕೇಶ್‌ ಕನಕರಾಜ್‌ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಆದರೆ ಅದು ಇನ್ನು ಅಧಿಕೃವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next