ನವದೆಹಲಿ : ಕಳೆದ ಕೆಲವು ತಿಂಗಳಿಂದ ರಜನಿಕಾಂತ್ ನಟನೆಯ ಅಣ್ಣಾತೆ ಸಿನಿಮಾ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು, ಇದೀಗ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ನಟ ರಜಿನಿಕಾಂತ್ ಹೈದರಾಬಾದ್ ನಿಂದ ಚೆನ್ನೈಗೆ ಮರಳಿದ್ದಾರೆ. ವಿಶೇಷ ಏನಂದ್ರೆ ರಜನಿಕಾಂತ್ ಚೆನ್ನೈನ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಪತ್ನಿ ಲತಾ ಆರತಿ ಬೆಳಗುವುದರ ಮೂಲಕ ಸ್ವಾಗತ ಕೋರಿದ್ದಾರೆ. ನಂತರ ಮನೆ ಮುಂದೆ ಜಮಾಯಿಸಿದ್ದ ಅಭಿಮಾನಿಗಳ ಕೈ ಬೀಸಿದ ರಜನಿಕಾಂತ್ ಒಳಗೆ ನಡೆದರು.
ಚೆನ್ನೈಗೆ ಆಗಮಿಸುವ ಮುನ್ನ ತಲೈವಾ ಹೈದರಾಬಾದ್ ನ ಮೋಹನ್ ಬಾಬು ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಮೋಹನ್ ಬಾಬು ಮತ್ತು ಮಗಳು ಲಕ್ಷ್ಮಿ ಮಂಚು ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ಇನ್ನು ಕಳೆದ ಡಿಸೆಂಬರ್ ತಿಂಗಳಲ್ಲಿ ಅಣ್ಣಾತ್ತೆ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿತ್ತು. ಕೂಡಲೇ ಶೂಟಿಂಗ್ ರದ್ದುಗೊಳಿಸಲಾಗಿತ್ತು. ಹೈದರಾಬಾದ್‌ಗೆ ಚೆನ್ನೈಗೆ ತೆರಳಿದ್ದ ರಜನಿಕಾಂತ್ ಕೆಲವು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.