“ಪತ್ನಿ ಲತಾ ನನ್ನ ಜೀವನದಲ್ಲಿ ಬಂದ ಮೇಲೆ ಬಹಳ ಬದಲಾವಣೆ ಆಯಿತು. ಮುಖ್ಯವಾಗಿ ನಾನು ಕ್ರಮ ಶಿಕ್ಷಣ ಕಲಿತೆ,’ ಎಂದು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
Advertisement
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಬಸ್ ಕಂಡಕ್ಟರ್ ಆಗಿದ್ದಾಗ ನಾನು ಪ್ರತಿದಿನ ಮದ್ಯ ಸೇವಿಸುತ್ತಿದ್ದೆ. ಸೇದುತ್ತಿದ್ದ ಸಿಗರೇಟ್‌ಗಳ ಬಗ್ಗೆ ಲೆಕ್ಕವೇ ಇರುತ್ತಿರಲಿಲ್ಲ. ದಿನಕ್ಕೆ ಎರಡು ಬಾರಿ ಮಾಂಸಾಹಾರ ತಪ್ಪುತ್ತಿರಲಿಲ್ಲ,’ ಎಂದಿದ್ದಾರೆ.
“ಪತ್ನಿ ಲತಾ ತನ್ನ ಪ್ರೀತಿಯಿಂದ ನನ್ನನ್ನು ದುಶ್ಚಟಗಳಿಂದ ದೂರವಾಗುವಂತೆ ಮಾಡಿದಳು. ಆಕೆಯಿಂದಲೇ ನಾನು ಇಂದು ಆರೋಗ್ಯವಾಗಿ ಜೀವನ ನಡೆಸುತ್ತಿದ್ದೇನೆ,’ ಎಂದು ಹೇಳಿದ್ದಾರೆ.