Advertisement

Jailer: ರಜಿನಿ – ಶಿವಣ್ಣ ಮುಖಾಮುಖಿ.. ʼಜೈಲರ್‌ʼ ಹೊಸ ಪೋಸ್ಟರ್‌ ವೈರಲ್

01:40 PM Aug 06, 2023 | Team Udayavani |

ಚೆನ್ನೈ: ಸೂಪರ್ ಸ್ಟಾರ್‌ ʼಜೈಲರ್‌ʼ ರಿಲೀಸ್‌ ಗೆ 4 ದಿನಗಳು ಮಾತ್ರ ಬಾಕಿ ಉಳಿದಿದೆ. ರಿಲೀಸ್‌ ಹತ್ತಿರಕ್ಕೆ ಬರುತ್ತಿದ್ದಂತೆ ಸಿನಿಮಾ ತಂಡ ಒಂದೊಂದೇ ಪೋಸ್ಟರ್‌ ಗಳನ್ನು ರಿಲೀಸ್‌ ಮಾಡಿ ಕುತೂಹಲ ಹೆಚ್ಚಿಸುತ್ತಿದೆ.

Advertisement

ಇತ್ತೀಚಗೆ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ರಜಿನಿಕಾಂತ್‌ ಅಭಿಮಾನಿಗಳ ವಲಯದಲ್ಲಿ ಈ ಟ್ರೇಲರ್‌ ಸಿಕ್ಕಾಪಟ್ಟೆ ಸದ್ದು ಮಾಡಿದೆ. ವಯಸ್ಸು 70  ದಾಟಿದರೂ ರಜಿನಿ 20 ರ ಹುಡುಗನಂತೆ ಮಾಸ್‌ & ಕ್ಲಾಸ್‌ ಲುಕ್‌ ನಲ್ಲಿ ಮಿಂಚಿದ್ದಾರೆ. ಟ್ರೇಲರ್‌ನೊಂದಿಗೆ ಅನಿರುದ್ಧ್‌ ಅವರ ಬಿಜಿಎಂ ಟ್ರೇಲರ್‌ ನೋಡಗರನ್ನು ರೋಮಂಚನಗೊಳಿಸುತ್ತದೆ.

ಟ್ರೇಲರ್‌ ಜನರಿಗೆ ಇಷ್ಟವಾಗಿದೆ. ಆದರೆ ಇಡೀ ಟ್ರೇಲರ್‌ ನಲ್ಲಿ ರಜಿನಿ ಬಿಟ್ಟು ಉಳಿದ ಪ್ರಮುಖ ಸ್ಟಾರ್‌ ಗಳನ್ನು ತೋರಿಸಿಲ್ಲ. ಶಿವರಾಜ್‌ ಕುಮಾರ್‌ ಹಾಗೂ ಮೋಹನ್‌ ಲಾಲ್‌ ಅವರ ದೃಶ್ಯವನ್ನು ತೋರಿಸಿಲ್ಲ. ಇದು ಕೆಲ ಪ್ರೇಕ್ಷಕರಿಗೆ ನಿರಾಶರನ್ನಾಗಿ ಮಾಡಿತ್ತು.

ಇದೀಗ ಸನ್‌ ಪಿಕ್ಚರ್ಸ್‌ ನಟ ಶಿವರಾಜ್‌ ಕುಮಾರ್‌ ಅವರ ಪಾತ್ರದ ಪೋಸ್ಟರ್‌ ರಿಲೀಸ್‌ ಮಾಡಿದೆ. ಗದ್ದೆಯ  ಹಿನ್ನೆಲೆಯಂತಿರುವ ಜಾಗದಲ್ಲಿ ಶಿವರಾಜ್‌  ಕುಮಾರ್‌ – ರಜಿನಿಕಾಂತ್‌ ಪರಸ್ಪರ ನೋಟದಿಂದ ನಿಂತುಕೊಂಡಿರುವುದನ್ನು ಪೋಸ್ಟರ್‌ ನಲ್ಲಿ ತೋರಿಸಲಾಗಿದೆ. ಮೊದಲ ಬಾರಿ ಸೂಪರ್‌ ಸ್ಟಾರ್‌ – ಶಿವಣ್ಣ ಇಬ್ಬರನ್ನು ಒಂದೇ ಸ್ಕ್ರೀನ್‌ ನಲ್ಲಿ ನೋಡಲು ರೆಡಿಯಾಗಿ , ಇನ್ನು 4 ದಿನಗಳಲ್ಲಿ ʼಜೈಲರ್‌ʼ ನಿಮ್ಮ ಮುಂದೆ ಎಂದು ಸನ್‌ ಪಿಕ್ಚರ್ಸ್‌ ಟ್ವೀಟ್‌ ಮಾಡಿದೆ.

ಈಗಾಗಲೇ ʼಜೈಲರ್‌ʼ ಸಿನಿಮಾದ ಬುಕಿಂಗ್‌ ಓಪನ್‌ ಆಗಿದ್ದು, ಬಹಳ ವೇಗದಿಂದ ಟಿಕೆಟ್‌ ಬುಕ್‌ ಆಗುತ್ತಿದೆ.

Advertisement

ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ, ವಿನಾಯಕನ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ಆ.10 ರಂದು ಸಿನಿಮಾ ತೆರೆಗೆ ಬರಲಿದೆ.

 

 

 

Advertisement

Udayavani is now on Telegram. Click here to join our channel and stay updated with the latest news.

Next