Advertisement

Martin Movie: ಮಾರ್ಟಿನ್‌ಗೆ ರಜಿನಿ ವೆಟ್ಟೈಯಾನ್‌ ಪೈಪೋಟಿ

04:59 PM Aug 20, 2024 | Team Udayavani |

ಧ್ರುವ ಸರ್ಜಾ ನಟನೆಯ ಪ್ಯಾನ್‌ ಇಂಡಿಯಾ ಚಿತ್ರ “ಮಾರ್ಟಿನ್‌’ ಅಕ್ಟೋಬರ್‌ 11ರಂದು ಬಿಡುಗಡೆಯಾಗುವುದಾಗಿ ಘೋಷಿಸಿಕೊಂಡಿದೆ. ಈಗಾಗಲೇ ಚಿತ್ರದ ಟೀಸರ್‌, ಟ್ರೇಲರ್‌ 1 ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ.

Advertisement

ದೇಶ-ವಿದೇಶಗಳಲ್ಲೂ “ಮಾರ್ಟಿನ್‌’ ಕ್ರೇಜ್‌ ಇದೆ. ಈ ನಡುವೆಯೇ “ಮಾರ್ಟಿನ್‌’ ಚಿತ್ರಕ್ಕೆ ತಮಿಳಿನ ಎರಡು ದೊಡ್ಡ ಹಾಗೂ ಸೂಪರ್‌ ಸ್ಟಾರ್‌ ಚಿತ್ರಗಳು ಅಡ್ಡ ಬಂದಿವೆ. ಅದು ರಜಿನಿಕಾಂತ್‌ ನಟನೆಯ “ವೆಟ್ಟೈಯಾನ್‌’ ಹಾಗೂ ಸೂರ್ಯ ನಟನೆಯ “ಕಂಗುವ’.

ಈ ಎರಡು ಚಿತ್ರಗಳು ಅಕ್ಟೋಬರ್‌ನಲ್ಲಿ ಬರಲಿವೆ. ರಜನಿಕಾಂತ್‌ “ವೆಟ್ಟೈಯಾನ್‌’ ಚಿತ್ರ ಸೋಮವಾರ ತನ್ನ ಬಿಡುಗಡೆ ದಿನಾಂಕ ಘೋಷಿಸಿದ್ದು, ಅಕ್ಟೋಬರ್‌ 10ರಂದು ತೆರೆಕಾಣುತ್ತಿದೆ. ಅಂದರೆ “ಮಾರ್ಟಿನ್‌’ ಚಿತ್ರಕ್ಕೆ ಒಂದು ದಿನ ಮೊದಲೇ.. ಇನ್ನು “ಕಂಗುವ’ ಕೂಡಾ ಅ.10ರಂದೇ ಬರಲಿದೆ. ಈ ಮೂಲಕ ತಮಿಳಿನ ಎರಡು ಚಿತ್ರಗಳ ಪೈಪೋಟಿಯ ಜೊತೆಗೆ ಕನ್ನಡದಿಂದ ತಯಾರಾದ ಪ್ಯಾನ್‌ ಇಂಡಿಯಾ “ಮಾರ್ಟಿನ್‌’ಗೂ ದೊಡ್ಡ ಪೈಪೋಟಿ ಎದುರಾಗಿರುವುದು ಸುಳ್ಳಲ್ಲ.

ಇನ್ನು, ಸೂರ್ಯ ನಟಿಸಿದ “ಜೈ ಭೀಮ್’ ಸಿನಿಮಾ ನಿರ್ದೇಶಿಸಿದ್ದ ಟಿ.ಎಸ್‌. ಜ್ಞಾನವೇಲ್‌ “ವೆಟ್ಟೈಯಾನ್‌’ ನಿರ್ದೇಶಕರು.

ಇನ್ನು “ಮಾರ್ಟಿನ್‌’ ಕೂಡಾ ಅದ್ಧೂರಿ ಬಜೆಟ್‌ನಲ್ಲಿ ತಯಾರಾಗಿದು, ಸುಮಾರು 240 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಮಗೆ ನಮ್ಮ ಕಂಟೆಂಟ್‌ ಬಗ್ಗೆ ವಿಶ್ವಾಸವಿದೆ. ಕನ್ನಡದ ಜೊತೆಗೆ ಬೇರೆ ಭಾಷೆಯ ಪ್ರೇಕ್ಷಕರು ಇಷ್ಟಪಡುತ್ತಾರೆ. ನಮ್ಮ ಕನ್ನಡದಿಂದ ಬೇರೆ ಭಾಷೆಗಳಿಗೆ ಹೋಗುತ್ತಿರುವ ಸಿನಿಮಾವಿದು. ಇನ್ನು ನಮ್ಮ ಕರ್ನಾಟಕದಲ್ಲಿ ಈ ಚಿತ್ರವನ್ನು ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಸ್ವೀಕರಿಸಿ ಗೆಲ್ಲಿಸುತ್ತಾರೆಂಬ ನಂಬಿಕೆ ನನಗಿದೆ. ಹಾಗಾಗಿ, “ಮಾರ್ಟಿನ್‌’ ಮುಂದೆ ಯಾರೇ ಬಂದರೂ ಎದುರಿಸಿ, ಮುಂದುವರೆಯಲೇಬೇಕು. –ಉದಯ್‌ ಮೆಹ್ತಾ, “ಮಾರ್ಟಿನ್‌’ ನಿರ್ಮಾಪಕ

Advertisement

 

Advertisement

Udayavani is now on Telegram. Click here to join our channel and stay updated with the latest news.