Advertisement

ಬಿರ್ದ್‌ದ ಕಂಬುಲ-ವೀರ ಕಂಬಳ ತುಳು ಕನ್ನಡ ಚಲನಚಿತ್ರಗಳಿಗೆ ಮುಹೂರ್ತ

01:37 AM Dec 04, 2021 | Team Udayavani |

ಮೂಡುಬಿದಿರೆ: ರಾಜ್ಯದಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗಬೇಕೆಂಬ ಐದು ದಶಕಗಳ ಕನಸು ಇನ್ನೂ ನನ ಸಾಗಿಲ್ಲ. ಮೈಸೂರು, ಶಿವಮೊಗ್ಗ, ಬೆಂಗಳೂರು ಎಂದು ಫಿಲ್ಮ್ ಸಿಟಿ ನಿರ್ಮಾಣದ ಚೆಂಡು ಹೊಯ್ದಾಡುತ್ತಿರುವುದು ನಿಜಕ್ಕೂ ಶೋಚನೀಯ. ಫಿಲ್ಮ್ ಸಿಟಿ ನಿರ್ಮಾಣವಾದರೆ ರಾಜ್ಯದ ಫಿಲ್ಮ್ ಟೂರಿಸಂ ಮತ್ತು ರಂಗಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಚಿತ್ರನಿರ್ದೇಶಕ, ನಿರ್ಮಾಪಕ ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ಅಭಿಪ್ರಾಯಪಟ್ಟರು.

Advertisement

ಬಿರ್ದ್‌ದ ಕಂಬುಲ ಎಂಬ ತುಳು ಮತ್ತು ವೀರ ಕಂಬಳ ಹೆಸರಿನ ಕನ್ನಡ ಚಲನಚಿತ್ರದ ಮುಹೂರ್ತ ಕಾರ್ಯ
ಕ್ರಮದ ಬಳಿಕ ಅವರು ಪತ್ರಕರ್ತ ರೊಂದಿಗೆ ಮಾತನಾಡಿದರು.

ಸಹಾಯಧನ ಏರಿಸಲಿ
ರಾಜ್ಯದಲ್ಲಿ ತಯಾರಾಗುವ ಚಿತ್ರಗಳಿಗೆ ಸದ್ಯ ನೀಡಲಾಗುವ ಸಹಾಯಧನ ಮೊತ್ತವನ್ನು ಏರಿಸ ಬೇಕು; ತುಳು ಸಹಿತ ಪ್ರಾದೇಶಿಕವಾದ ಕೊಡವ, ಕೊಂಕಣಿ, ಬ್ಯಾರಿ ಭಾಷೆಗಳಲ್ಲಿ ತಯಾರಾಗುವ ಚಲನಚಿತ್ರಗಳಿಗೆ ಗರಿಷ್ಠ ಪ್ರೋತ್ಸಾಹ ನೀಡಬೇಕು ಈ ನಿಟ್ಟಿನಲ್ಲಿ ಜನಪ್ರತಿ ನಿಧಿಗಳು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದರು.

ಕಂಬಳದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ನಿರ್ಮಿಸಲಾಗುತ್ತಿರುವ ಈ ಚಿತ್ರಗಳ ಚಿತ್ರೀಕರಣವನ್ನು ಮುಂದಿನ ಮಾರ್ಚ್‌ಗೆ ಮುಗಿಸಿ ಮೇ ವೇಳೆಗೆ ತೆರೆಗೆ ತರಲು ಎಲ್ಲ ಸಿದ್ಧತೆಗಳಾಗುತ್ತಿವೆ ಎಂದವರು ತಿಳಿಸಿದರು.

ಇದನ್ನೂ ಓದಿ:ತಂತ್ರಜ್ಞಾನ ಅಳವಡಿಕೆಯಲ್ಲಿ ನಾವು ದ್ವಿತೀಯ: ಪ್ರಧಾನಿ ಮೋದಿ

Advertisement

ಹಟ್ಟಿಕುದ್ರು ಅನಂತಪದ್ಮನಾಭ ಭಟ್‌ ಅವರು ಕ್ಲ್ಯಾಪಿಂಗ್ ನಡೆಸಿ ದರು. ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಕೆಮರಾ ಚಾಲನೆಗೈದರು. ಪೊಲೀಸ್‌ ಆಯುಕ್ತ ಶಶಿಕುಮಾರ್‌ ಶುಭ ಹಾರೈಸಿದರು.

ಚಿತ್ರದ ನಿರ್ಮಾಪಕ ಅರುಣ್‌ ರೈ ತೋಡಾರು ಅತಿಥಿಗಳನ್ನು ಗೌರವಿಸಿದರು. ಕಂಬಳ ಅಕಾಡೆಮಿ ನಿರ್ದೇಶಕ ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್‌ ಹೆಗ್ಡೆ, ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ ಎಸ್‌. ಕೋಟ್ಯಾನ್‌ ಆರಂಭಿಕ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಈಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್‌, ಮಾಜಿ ಸಚಿವ ಕೆ. ಅಭಯಚಂದ್ರ , ಜಗದೀಶ ಅಧಿಕಾರಿ, ರಾಜಶೇಖರ ಕೋಟ್ಯಾನ್‌, ಪ್ರಕಾಶ ಪಾಂಡೇಶ್ವರ ಹಾಗೂ ಚಿತ್ರ ತಂಡದ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next