Advertisement

ಆನಂದ ತಂದ ರಾಜೀವ

09:47 AM Oct 24, 2019 | Lakshmi GovindaRaju |

ರಾಜೀವ… ಬಹುಶಃ ಈ ಹೆಸರು ಕೇಳಿದೊಡನೆ ಕನ್ನಡ ಚಿತ್ರರಂಗದ ಸೂಪರ್‌ ಹಿಟ್‌ ಸಿನಿಮಾ “ಬಂಗಾರದ ಮನುಷ್ಯ’ ನೆನಪಾಗದೇ ಇರದು. ಯಾಕೆಂದರೆ, ಆ ಚಿತ್ರದಲ್ಲಿ ಡಾ.ರಾಜಕುಮಾರ್‌ ಅವರ ಪಾತ್ರದ ಹೆಸರು ರಾಜೀವ. ಈಗ ಇದೇ ಹೆಸರಿನಡಿ ಸಿನಿಮಾ ಶುರುವಾಗಿದ್ದು, ಇನ್ನೇನು ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ “ರಾಜೀವ’ನಾಗಿ ಮಯೂರ್‌ ಪಟೇಲ್‌ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗಿಲ್ಲಿ ಮೂರು ವಿಭಿನ್ನ ಪಾತ್ರಗಳಿವೆ. 25 ವರ್ಷದ ಯುವಕರಾಗಿ, 40 ಹಾಗೂ 60 ವರ್ಷದ ವ್ಯಕ್ತಿಯಾಗಿಯೂ ಅವರು ಗಮನಸೆಳೆಯಲಿದ್ದಾರೆ.

Advertisement

ಇನ್ನು, ಚಿತ್ರವನ್ನು ಫ್ಲೈಯಿಂಗ್‌ ಕಿಂಗ್‌ ಮಂಜು ನಿರ್ದೇಶಿಸಿದ್ದಾರೆ. ಕಥೆ ಬಗ್ಗೆ ಹೇಳುವ ಅವರು, “ಇದೊಂದು ಯುವ ರೈತರ ಕುರಿತಾದ ಚಿತ್ರ. ಬೆಳೆನಾಶ, ಸಾಲಬಾಧೆ ಹೀಗೆ ಇನ್ನಿತರೆ ಕಾರಣಗಳಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಂತಹ ಸೂಕ್ಷ್ಮ ವಿಚಾರ ಇಟ್ಟುಕೊಂಡು ತೆರೆಯ ಮೇಲೆ ಬಿತ್ತರಿಸುವ ಪ್ರಯತ್ನವಾಗಿದೆ. ಚಿತ್ರದ ನಾಯಕ ಐಎಎಸ್‌ ಮಾಡಿ, ಪಟ್ಟಣದಿಂದ ಪುನಃ ಹಳ್ಳಿಗೆ ಹಿಂದಿರುಗುತ್ತಾನೆ. ಅಲ್ಲಿ ನಡೆಯುವ ಘಟನೆ ಕಂಡು ಮರಗುತ್ತಾನೆ. ಹಂತರ ಹಳ್ಳಿ ಬಿಟ್ಟು ಪಟ್ಟಣಕ್ಕೆ ಹೊರಡುವ ಯುವಕರ ಮನಸ್ಸು ಬದಲಿಸಿ, ಹಳ್ಳಿಯಲ್ಲೇ ಕೃಷಿ ಮಾಡಲು ಉತ್ತೇಜಿಸಿ, ಹೋರಾಡುತ್ತಾನೆ ಎಂಬುದು ಹೈಲೈಟ್‌.

ಮಂಡ್ಯ, ಬೆಂಗಳೂರು ಇತರೆಡೆ ಚಿತ್ರೀಕರಣವಾಗಿದೆ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.ಚಿತ್ರದ ಮತ್ತೂಂದು ವಿಶೇಷವೆಂದರೆ, ಮೂವರು ರೈತರ ಜೊತೆ ಸೇರಿ ರಾಘವೇಂದ್ರ ರಾಜಕುಮಾರ್‌ ಅವರು ಆಡಿಯೋ ಸಿಡಿ ಬಿಡುಗಡೆ ಮಾಡಿ, “ಹದಿನೈದು ವರ್ಷಗಳ ನಂತರ ನಟಿಸಿದ “ಅಮ್ಮನ ಮನೆ’ ಸಿನಿಮಾದಲ್ಲೂ ರಾಜೀವ ಹೆಸರಿನ ಪಾತ್ರ ಮಾಡಿದ್ದೆ. ಈಗ ಅದೇ ಹೆಸರಿನ ಚಿತ್ರವಾಗಿದೆ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದು ಶುಭಹಾರೈಸಿದರು.

ಲಹರಿ ವೇಲು “ರಾಜೀವ’ ಹಾಡುಗಳ ಕುರಿತು ಮಾತನಾಡಿದರು. ಚಿತ್ರಕ್ಕೆ ರೋಹಿತ್‌ ಸೋವರ್‌ ಸಂಗೀತವಿದೆ. ಶೇಖರ್‌ ಸೋವರ್‌ ಆರು ಗೀತೆ ರಚಿಸಿದ್ದಾರೆ. ಆ ಪೈಕಿ ಮಯೂರ್‌ ಪಟೇಲ್‌ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ವಿಜಯ್‌ ಸೋವರ್‌ ಸಂಕಲನವಿದೆ. ವರ್ಧನ್‌ ನೃತ್ಯವಿದೆ. ಕಾಕೋಳು ರಾಮಯ್ಯ ಅವರ ಸಂಭಾಷಣೆ ಇದೆ. ಆನಂದ್‌ ಇಳೆಯರಾಜ ಅವರ ಛಾಯಾಗ್ರಹಣವಿದೆ. ರಮೇಶ್‌ ನಿರ್ಮಾಣವಿದ್ದು, ಇವರ ಜೊತೆ ಕಿರಣ್‌ ಕೂಡ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.