Advertisement

ರಾಜಸ್ಥಾನದ ಅಜ್ಮೇರ್ ಗೆ ಸಿಗಲಿದೆ ವಿಲಾಸಿ ನೌಕೆ ಸವಾರಿ

12:10 AM Jan 09, 2023 | Team Udayavani |

ಜೈಪುರ: ಮರುಭೂಮಿಯಿಂದ ಕೂಡಿದ ರಾಜಸ್ಥಾನದಲ್ಲಿ ಮಾರ್ಚ್‌ನಿಂದ ವಿಲಾಸಿ ನೌಕೆಯ ಯಾನ ಶುರುವಾಗಲಿದೆ. ಅಜ್ಮೇರ್ ನ ಅನಾಸಾಗರ್‌ ಸರೋವರದಲ್ಲಿ ಎರಡು ಅಂತಸ್ತಿನ ನೌಕೆಯಲ್ಲಿ 150 ಮಂದಿಯ ಪ್ರಯಾಣಕ್ಕೆ ಅವಕಾಶ ಕೊಡಲು ತೀರ್ಮಾನಿಸಲಾಗಿದೆ.

Advertisement

ಬ್ರಹ್ಮ ದೇಗುಲ ಮತ್ತು ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್‌ ಚಿಸ್ತಿ – ಈ ಎರಡು ಪವಿತ್ರ ಕ್ಷೇತ್ರಗಳ ಕಾರಣದಿಂದಾಗಿ ಅಜ್ಮೇರ್ ಈಗಾಗಲೇ ಖ್ಯಾತಿಯನ್ನು ಹೊಂದಿದೆ. ಯೋಜನೆ ಜಾರಿಯ ಬಗ್ಗೆ ಕಳೆದ ವರ್ಷವೇ ಟೆಂಡರ್‌ ಹೊರಡಿಸಲಾಗಿತ್ತು.

ಮುಂದಿನ ತಿಂಗಳ ವೇಳೆಗೆ ವಿಲಾಸಿ ನೌಕೆ ಸಿದ್ಧಗೊಳ್ಳಲಿದೆ. ಮಾರ್ಚ್‌ ಮೊದಲ ವಾರದಲ್ಲಿ ಹೊಸ ಸೇವೆ ಶುರುವಾಗಲಿದೆ.

ಇದರಿಂದಾಗಿ ಅಜ್ಮೇರ್ ಮಹಾನಗರ ಪಾಲಿಕೆಗೆ ವಾರ್ಷಿಕವಾಗಿ 66.5 ಲಕ್ಷ ರೂ. ಲಾಭವೂ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next