ಜೈಪುರ್: ಕೋವಿಡ್ 19 ಸೋಂಕಿಗೆ ಒಳಗಾದ ರೋಗಿಗಳ ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕರಿಗೆ ಅನಾರೋಗ್ಯ ತಂದೊಡ್ಡಲಿರುವ ಹಿನ್ನೆಲೆಯಲ್ಲಿ ಸಿಡಿಮದ್ದು(ಪಟಾಕಿ) ಮಾರಾಟ ನಿಷೇಧಿಸಲಾಗಿದೆ ಎಂದು ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ(02-11-2020) ತಿಳಿಸಿದ್ದಾರೆ.
ಸಿಡಿಮದ್ದು ಸಿಡಿಸುವ ಮೂಲಕ ಕಲುಷಿತ ವಾತಾವರಣದಿಂದ ಕೋವಿಡ್ 19 ಸೋಂಕಿಗೆ ಒಳಗಾದ ರೋಗಿಗಳಿಗೆ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿರುವ ನಿಟ್ಟಿನಲ್ಲಿ ಸಿಡಿಮದ್ದು ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿ ಪಟಾಕಿ ಮಾರಾಟ ಮಾಡಿದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಈಗಾಗಲೇ ದೆಹಲಿ ಸರ್ಕಾರ ಕೂಡಾ ದೀಪಾವಳಿ ಸಂದರ್ಭದಲ್ಲಿ ಪರಿಸರ ಸ್ನೇಹಿ ಹಸಿರು ಪಟಾಕಿ ಮಾತ್ರ ಉಪಯೋಗಿಸುವಂತೆ ಆದೇಶ ನೀಡಿದ್ದು, ಒಂದು ವೇಳೆ ಸಿಡಿಮದ್ದು ಮಾರಾಟ ಕಂಡುಬಂದಲ್ಲಿ ದುಬಾರಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ:ರಾಷ್ಟ್ರೀಯ ದಾಖಲೆ ಬರೆದ ಸವಣೂರು ನಡುಬೈಲಿನ ಅಭಿಷೇಕ್ ಎನ್ ಶೆಟ್ಟಿಗೆ ಏಕಲವ್ಯ ಪ್ರಶಸ್ತಿ
ಉತ್ತರಭಾರತದ ರಾಜ್ಯಗಳಲ್ಲಿಯೂ ಅಧಿಕವಾಗಿ ವಾಯು ಮಾಲಿನ್ಯ ಕಂಡು ಬಂದಿರುವುದರಿಂದ ವಾಯು ಮಾಲಿನ್ಯ ತಡೆಗಾಗಿ ರಾಜ್ಯಗಳು ಇಂತಹ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿರುವುದಾಗಿ ವರದಿ ಹೇಳಿದೆ.