ಜೈಪುರ: ಟ್ರಾಫಿಕ್ ನಿಯಮ ಉಲ್ಲಂಘಿಸಿ ಬೈಕ್ ನಲ್ಲಿ ಅಪ್ಪಿಕೊಂಡು, ಮುದ್ದಾಡುತ್ತಾ ಹೋಗುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು, ಇದೀಗ ಅಂಥದ್ದೇ ಮತ್ತೊಂದು ಘಟನೆ ರಾಜಸ್ಥಾನದಲ್ಲೇ ನಡೆದಿರುವುದು ವೈರಲ್ ಆಗಿದೆ.
ಹೋಳಿ ಹಬ್ಬವನ್ನು ಆಚರಿಸಿಕೊಂಡು ಇಬ್ಬರು ಪ್ರೇಮಿಗಳು ಬುಲೆಟ್ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾರೆ. ಹುಡುಗಿ ಬುಲೆಟ್ ನ ಪೆಟ್ರೋಲ್ ಟ್ಯಾಂಕರ್ ನಲ್ಲಿ ಹುಡಗನನ್ನು ಅಪ್ಪಿಕೊಂಡು ಕೂತಿದ್ದಾಳೆ. ಆತನನ್ನು ಮುದ್ದಾಡುತ್ತಾ, ಮುತ್ತು ಕೊಡುತ್ತಾ ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಹಾಡಹಗಲೇ ಜೈಪುರದ ಜವಾಹರ್ ಸರ್ಕಲ್ ಸ್ಕ್ವೇರ್ ಈ ಘಟನೆ ಪ್ರಕರಣ ನಡೆದಿದ್ದು, ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಇದನ್ನು ಸೆರೆ ಹಿಡಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸರು ಗಾಡಿ ನಂಬರ್ ಆಧಾರಿಸಿ ಸವಾರನನ್ನು ಹುಡುಕುವಲ್ಲಿ ನಿರತರಾಗಿದ್ದಾರೆ ಎಂದು ವರದಿ ತಿಳಿಸಿದೆ.