ನವದೆಹಲಿ:ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜತೆ ಮಾತುಕತೆ ನಡೆಸಿದ ಬಳಿಕ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಇದೀಗ ರಾಜಕೀಯದಲ್ಲಿ ವೈಯಕ್ತಿಕ ದ್ವೇಷಕ್ಕೆ ಜಾಗವಿಲ್ಲ ಎಂದು ಹೇಳುವ ಮೂಲಕ ರಾಜಸ್ಥಾನ ಬಿಕ್ಕಟ್ಟು ಕೊನೆಗೊಂಡಂತಾಗಿದೆ ಎಂದು ವರದಿ ತಿಳಿಸಿದೆ.
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪೈಲಟ್, ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಆದರೆ ನಮಗೆ ನಮ್ಮದೇ ಆದ ಗೌರವಾದಾರಗಳು ಸಿಗಬೇಕು ಎಂದು ಹೇಳಿದರು.
ನಾನು ಪಕ್ಷಕ್ಕಾಗಿ 18ರಿಂದ 20 ವರ್ಷಗಳ ಕಾಲ ದುಡಿದಿದ್ದೇನೆ. ಸರ್ಕಾರ ರಚನೆಗಾಗಿ ಯಾರು ಶ್ರಮಪಟ್ಟು ದುಡಿದಿದ್ದಾರೋ ಅವರನ್ನು ನಾವು ಗೌರವಿಸಬೇಕಾಗಿದೆ. ನಾನು ಆರಂಭದಲ್ಲಿಯೇ ಹೇಳಿದ್ದೆ ಇದೆಲ್ಲವೂ ತತ್ವದ ಮೇಲೆ ಅವಲಂಬಿತವಾಗಿದೆ. ಇವು ಪಕ್ಷ ಬೆಳೆಯಲು ಬೇಕಾಗದ ತುರ್ತು ಆಲೋಚನೆ ಎಂಬ ನಿಲುವು ನನ್ನದಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರ ಜತೆ ಮಾತುಕತೆ ನಡೆಸಿದ ಬಳಿ ಮಾತನಾಡಿದ ಅವರು, ರಾಜಸ್ಥಾನದ ಕಾಂಗ್ರೆಸ್ ಹಿತಸಕ್ತಿಗಾಗಿ ನಾವೆಲ್ಲ ಒಗ್ಗಟ್ಟಾಗಿ ದುಡಿಯಬೇಕಾಗಿದೆ. ಎಐಸಿಸಿಯಿಂದ ಮೂವರು ಸದಸ್ಯರ ಸಮಿತಿ ರಚಿಸಲು ನಿರ್ಧರಿಸಿದ್ದಾರೆ. ಇವರು ನನ್ನ ಬೇಡಿಕೆಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ವರದಿ ವಿವರಿಸಿದೆ.