Advertisement

ಬಿಸಿಸಿಐನಿಂದ ರಾಜಸ್ಥಾನ ಕ್ರಿಕೆಟ್‌ ಸಂಸ್ಥೆ ನಿಷೇಧ ಹಿಂದಕ್ಕೆ

06:05 AM Jan 28, 2018 | |

ಜೈಪುರ: ರಾಜಸ್ತಾನ್‌ ರಾಯಲ್ಸ್‌ ಕ್ರಿಕೆಟ್‌ ಅಭಿಮಾನಿಗಳಿಗೆ ಸಿಹಿಸುದ್ದಿ. ರಾಜಸ್ಥಾನ ಕ್ರಿಕೆಟ್‌ ಸಂಸ್ಥೆ ಮೇಲೆ ಹೇರಿದ್ದ ನಿಷೇಧವನ್ನು ಬಿಸಿಸಿಐ ಈಗ ಹಿಂದಕ್ಕೆ ಪಡೆದುಕೊಂಡಿದೆ. ಇದರೊಂದಿಗೆ ರಾಜಸ್ಥಾನದಲ್ಲಿ ಮುಂಬರುವ ಐಪಿಎಲ್‌ ಪಂದ್ಯಗಳು ನಿರಾತಂಕವಾಗಿ ನಡೆಯಲಿದೆ.

Advertisement

ಐದು ವರ್ಷದ ಬಳಿಕ ರಾಜಸ್ಥಾನ ತಂಡದ ಪಂದ್ಯಗಳಿಗೆ ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣ ಆತಿಥ್ಯವಹಿಸಲಿದೆ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಶನಿವಾರ ಪ್ರಕಟಿಸಿದ್ದಾರೆ. 

2013ರಲ್ಲಿ ರಾಜಸ್ಥಾನ ಕ್ರಿಕೆಟ್‌ ಸಂಸ್ಥೆ ಬಿಸಿಸಿಐ ಆದೇಶ ಉಲ್ಲಂ ಸಿ ವಿವಾದಿತ ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್‌ ಮೋದಿಗೆ ಚುನಾವಣೆಗೆ ನಿಲ್ಲಲು ಅವಕಾಶ ನೀಡಿತ್ತು. ಮೋದಿ ಆಯ್ಕೆಯೂ ಆದರು. ಈ ಹಂತದಲ್ಲಿ ಆರ್‌ಸಿಎ ಅಮಾನತುಗೊಳಿಸಿ ಬಿಸಿಸಿಐ ಆದೇಶ ಹೊರಡಿಸಿತು. ಇದರ ವಿರುದ್ಧ ಆರ್‌ಸಿಎ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ಹೈಕೋರ್ಟ್‌ನಲ್ಲಿತ್ತು. ಇದೀಗ ಬಿಸಿಸಿಐ ಹಿಡಿತವನ್ನು ಸ್ವಲ್ಪ ಸಡಿಲಗೊಳಿಸಿದೆ. ಪರಿಣಾಮ 2013ರ ಬಳಿಕ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣ ಐಪಿಎಲ್‌ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ಅಮಾನತುಗೊಂಡಿದ್ದ ಸಮಯದಲ್ಲಿ ರಾಯಲ್ಸ್‌ ಅಹ್ಮದಾಬಾದ್‌, ಪುಣೆಯನ್ನು ತವರು ಮೈದಾನವಾಗಿ ಮಾಡಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next