ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕೋಪದಿಂದ ಬಾರ್ಮರ್ ಜಿಲ್ಲಾಧಿಕಾರಿಯತ್ತ ಮೈಕ್ ಎಸೆದ ಘಟನೆ ಶನಿವಾರ ನಡೆದಿದೆ. ಸಾರ್ವಜನಿಕ ಸಮಾರಂಭದಲ್ಲಿ ಕೋಪಗೊಂಡ ಸಿಎಂ ಮೈಕ್ ಎಸೆದಿದ್ದಾರೆ. ಘಟನೆಯ ಉದ್ದೇಶಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಶುಕ್ರವಾರ ರಾತ್ರಿ ಬಾರ್ಮರ್ ಸರ್ಕ್ಯೂಟ್ ಹೌಸ್‌ನಲ್ಲಿ ಮುಖ್ಯಮಂತ್ರಿಗಳು ಮಹಿಳೆಯರ ಗುಂಪಿನೊಂದಿಗೆ ಸಂವಾದ ನಡೆಸುತ್ತಿದ್ದಾಗ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪ್ರತಿಕ್ರಿಯೆ ಸಂಗ್ರಹಿಸುವ ವೇಳೆ ಈ ಘಟನೆ ನಡೆದಿದೆ.
ಮುಖ್ಯಮಂತ್ರಿಗಳು ಜನಸಮೂಹವನ್ನು ಉದ್ದೇಶಿಸಿ ಮಾತನಾಡಲು ಪ್ರಯತ್ನಿಸುತ್ತಿದ್ದಂತೆ, ಮೈಕ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿತು ಸ್ಪಷ್ಟವಾಗಿ ಕೋಪಗೊಂಡ ಅವರು ಅದನ್ನು ಬಾರ್ಮರ್ ಜಿಲ್ಲಾಧಿಕಾರಿಯತ್ತ ಎಸೆದರು. ನಂತರ ಜಿಲ್ಲಾಧಿಕಾರಿ ಮೈಕ್ ಕೈಗೆತ್ತಿಕೊಂಡರು.
ಮಹಿಳೆಯರ ಗುಂಪಿನ ಹಿಂದೆ ಕೆಲವರು ನಿಂತಿದ್ದನ್ನು ಕಂಡು ಮುಖ್ಯಮಂತ್ರಿಗಳು ಮತ್ತೆ ತಾಳ್ಮೆ ಕಳೆದುಕೊಂಡರು. “ಎಸ್ಪಿ ಎಲ್ಲಿದ್ದಾರೆ? ಎಸ್ಪಿ ಮತ್ತು ಕಲೆಕ್ಟರ್ ಇಬ್ಬರೂ ಒಂದೇ ರೀತಿ ಕಾಣುತ್ತಾರೆ,” ಎಂದರು.
Related Articles
ಗೆಹ್ಲೋಟ್ ಎರಡು ದಿನಗಳ ಬಾರ್ಮರ್ ಪ್ರವಾಸದಲ್ಲಿದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರು ಮುಖ್ಯಮಂತ್ರಿಗಳಿಗೆ ವಿವಿಧ ಯೋಜನೆಗಳ ಸವಲತ್ತುಗಳನ್ನು ತಿಳಿಸಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.