ಜೈಪುರ/ನವದೆಹಲಿ: ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುತ್ತಿರುವುದರಿಂದಲೇ ಇತ್ತೀಚಿನ ದಿನಗಳಲ್ಲಿ ಹೀನ ಕೃತ್ಯಗಳು ಹೆಚ್ಚುತ್ತಿವೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಶುಕ್ರವಾರ ಅವರು ನವದೆಹಲಿಯಲ್ಲಿ ಕೇಂದ್ರದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಈ ಮಾತುಗಳನ್ನಾಡಿದ್ದರು. ಅದು ಈಗ ವಿವಾದವಾಗಿದೆ. “ನವದೆಹಲಿಯಲ್ಲಿ ನಿರ್ಭಯ ಪ್ರಕರಣದ ಅಪರಾಧಿಗಳನ್ನು ಸರ್ಕಾರ ಗಲ್ಲಿಗೇರಿಸಿತು. ಅದಾದ ನಂತರ ಅತ್ಯಾಚಾರ ಸಂತ್ರಸ್ತರ ಕೊಲೆ ಹೆಚ್ಚಾಗಿದೆ. ಅಪರಾಧಿಗಳು ಸಾಕ್ಷಿ ಸಿಗದಿರಲಿ ಎಂದು ಸಂತ್ರಸ್ತರನ್ನು ಹತ್ಯೆ ಮಾಡಲಾರಂಭಿಸಿದ್ದಾರೆ’ ಎಂದು ದೂರಿದ್ದರು.
ನಿರ್ಭಯ ತಾಯಿ ಆಕ್ರೋಶ
ರಾಜಸ್ಥಾನ ಸಿಎಂ ಹೇಳಿಕೆಗೆ ನಿರ್ಭಯಾ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರ ಎಸದಿವರಿಗೆ ಗಲ್ಲು ಶಿಕ್ಷೆ ನೀಡುವುದರ ಬಗ್ಗೆ ರಾಜಸ್ಥಾನ ಸಿಎಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಅವರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಟೀಕಿಸಿದ್ದಾರೆ. ಹೀನ ಕೃತ್ಯಕ್ಕೆ ಜನರ ಮನೋಭಾವನೆ ಕಾರಣವೇ ಹೊರತು ಕಾನೂನಿನ ಲೋಪ ಅಲ್ಲ ಎಂದಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಗೆಹ್ಲೋಟ್ “ನಾನು ಸತ್ಯವನ್ನೇ ಹೇಳಿದ್ದೇನೆ’ ಎಂದಿದ್ದಾರೆ.