Advertisement

ರಾಜಸ್ಥಾನ: ಅದಾನಿ ಗ್ರೂಪ್‌ನಿಂದ 65 ಸಾವಿರ ಕೋಟಿ ಹೂಡಿಕೆ

09:12 PM Oct 07, 2022 | Team Udayavani |

ಜೈಪುರ: ಏಷ್ಯಾದ ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ ನೇತೃತ್ವದ ಕಂಪನಿಗಳ ಜತೆಗೆ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ 65 ಸಾವಿರ ಕೋಟಿ ರೂ. ಮೌಲ್ಯದ ವಿವಿಧ ಒಪ್ಪಂದಳಿಗೆ ಸಹಿ ಹಾಕಿದೆ. ಶುಕ್ರವಾರ ಜೈಪುರದಲ್ಲಿ ಈ ಕಾರ್ಯಕ್ರಮ ನಡೆಯಿತು.

Advertisement

ಜೈಪುರ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವಿಕೆ, 10 ಸಾವಿರ ಮೆಗಾವ್ಯಾಟ್‌ ಸಾಮರ್ಥ್ಯದ ಸೌರ ವಿದ್ಯುತ್‌ ಘಟಕವನ್ನು ಮುಂದಿನ ಐದರಿಂದ ಏಳು ವರ್ಷಗಳ ಅವಧಿಯಲ್ಲಿ ಸ್ಥಾಪನೆ, ಸಿಎನ್‌ಜಿ ಘಟಕ ಸ್ಥಾಪನೆ ಸೇರಿದಂತೆ ಹಲವು ಘಟಕಗಳ ಸ್ಥಾಪನೆ ಬಗ್ಗೆ ಮಾತುಕತೆ ನಡೆಸಲಾಗಿದೆ.

“ಇನ್ವೆಸ್ಟ್‌ ರಾಜಸ್ಥಾನ-2022′ ಕಾರ್ಯಕ್ರಮದಲ್ಲಿ ಮಾತನಾಡಿದ ಉದ್ಯಮಿ ಗೌತಮ್‌ ಅದಾನಿ ರಾಜಸ್ಥಾನದಲ್ಲಿ ಕಂಪನಿ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next