Advertisement
ರಾಜರಾಜೇಶ್ವರಿ ನಗರದಲ್ಲಿ 150ಕ್ಕೂ ಹೆಚ್ಚು ಸ್ವಯಂಸೇವಕರು ಸೋಮವಾರದಿಂದ ಪ್ರಚಾರ ಕಾರ್ಯಕ್ಕಿಳಿಯಲಿದ್ದಾರೆ. ಶಿರಾದಲ್ಲೂ ಸಂಘ ಪರಿವಾರದ 500ಕ್ಕೂ ಹೆಚ್ಚು ಕಾರ್ಯಕರ್ತರು ಮತಗಟ್ಟೆವಾರು ಪ್ರಚಾರಕ್ಕೆ ಸಜ್ಜಾಗಿದ್ದಾರೆ.
ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಸೋಮವಾರದಿಂದ 150ಕ್ಕೂ ಹೆಚ್ಚು ಸ್ವಯಂ ಸೇವಕರು ಪ್ರಚಾರ ಆರಂಭಿ ಸಲಿದ್ದಾರೆ. ಕ್ಷೇತ್ರದಲ್ಲಿ 9 ವಾರ್ಡ್‌ಗಳಿದ್ದು, ಪ್ರತಿ ವಾರ್ಡ್‌ಗೆ ಒಬ್ಬ ಮಂಡಲ ಪದಾಧಿಕಾರಿ, ಜತೆಗೆ 15 ಮಂದಿ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಈ ತಂಡಗಳು ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿವೆ.
Related Articles
ಇದುವರೆಗೆ ಕಾಂಗ್ರೆಸ್, ಜೆಡಿಎಸ್ ಗೆಲುವು ಸಾಧಿಸುತ್ತಾ ಬಂದಿರುವ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸುವ ಉತ್ಸಾಹದಲ್ಲಿ ಬಿಜೆಪಿ ಸಂಘಟನೆ ಕಾರ್ಯ ಆರಂಭಿಸಿದೆ. ಉಪ ಚುನಾವಣೆ ಘೋಷಣೆಗೂ ಮೊದಲೇ “ಕೇಡರ್’ ವ್ಯವಸ್ಥೆ ರೂಪಿಸಿ ಸಂಘಟನೆ ಬಲಪಡಿಸಲು ಒತ್ತು ನೀಡಿದ್ದ ಕಮಲ ಪಕ್ಷದ ಪರ ಪ್ರಚಾರಕ್ಕೆ ಈಗ ಸಂಘ ಪರಿವಾರವೂ ಜತೆಗೂಡುತ್ತಿದೆ. ಸಂಘ ಪರಿವಾರದ 500ಕ್ಕೂ ಹೆಚ್ಚು ಮಂದಿಯ ಪಡೆ ರೂಪುಗೊಂಡಿದ್ದು, ಒಂದೆರಡು ದಿನದಲ್ಲೇ ಪ್ರಚಾರ ಕಾರ್ಯಕ್ಕೆ ಧುಮುಕಲಿದೆ.
Advertisement
ಬೃಹತ್ ಸಭೆ, ರ್ಯಾಲಿಗಳ ಬದಲು ಸಣ್ಣ, ಸಭೆಗಳನ್ನು ನಡೆಸಿ ಮನೆ ಸಂಪರ್ಕ ಕಾರ್ಯಕ್ಕೆ ಒತ್ತು ನೀಡಲಾಗುವುದು. ಬೂತ್ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್‌ಗ್ಳನ್ನು ರಚಿಸಿದ್ದು, ವರ್ಚ್ಯುವಲ್ ಸಭೆಗಳನ್ನು ನಡೆಸಲಾಗುವುದು.-ಎನ್. ರವಿಕುಮಾರ್, ಶಿರಾ ಕ್ಷೇತ್ರದ ಉಪಚುನಾವಣೆ ಉಸ್ತುವಾರಿ