Advertisement

‘ಭಜರಂಗಿ ಭಾಯಿಜಾನ್’ ಗೆ ನಿರ್ದೇಶನ ಮಾಡಲು ರಾಜಮೌಳಿ ‘ನೋ’ಎಂದಿದ್ದೇಕೆ ?

04:54 PM Jul 25, 2021 | Team Udayavani |

ಮುಂಬೈ : 2015 ರಲ್ಲಿ ತೆರೆ ಕಂಡಿದ್ದ ‘ಭಜರಂಗಿ ಭಾಯಿಜಾನ್’ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬಿಗ್ ಹಿಟ್ ನೀಡಿದ ಸಿನಿಮಾ. ಹಾಗೆ ನೋಡಿದ್ರೆ ಈ ಚಿತ್ರಕ್ಕೆ ಎಸ್.ಎಸ್. ರಾಜಮೌಳಿಯವರು ನಿರ್ದೇಶನ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲವೇಕೆ ಎಂಬುದು ಸದ್ಯ ರಿವೀಲ್ ಆಗಿದೆ.

Advertisement

ಭಜರಂಗಿ ಭಾಯಿಜಾನ್  ಚಿತ್ರಕ್ಕೆ ಕಥೆ ಬರೆದಿದ್ದು ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ . ಇವರು ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಬೇಕು ಎನ್ನುವ ಬಯಕೆ ಹೊಂದಿದ್ದರು. ಆದರೆ ಅದೇ ಸಮಯದಲ್ಲಿ ರಾಜಮೌಳಿ ಬಾಹುಬಲಿ ಚಿತ್ರದ ಯುದ್ಧದ ಸೀನ್ ಗಳ ಶೂಟಿಂಗ್ ನಲ್ಲಿ ಬ್ಯುಝಿಯಾಗಿದ್ದರು. ಕಥೆ ಕೇಳಿದರೂ ಕೂಡ ನಿರ್ದೇಶನಕ್ಕೆ ಒಪ್ಪಲಿಲ್ಲವಂತೆ ರಾಜಮೌಳಿ.

ಈ ವಿಷಯನ್ನು ಸ್ವತಃ ವಿಜಯೇಂದ್ರ ಪ್ರಸಾದ್ ಅವರೇ ಹೇಳಿಕೊಂಡಿದ್ದು, ನಾನು ಕಥೆ ಹೇಳಿದ ಸಮಯ ಸೂಕ್ತವಾಗಿರಲಿಲ್ಲ. ಅಂದು ರಾಜಮೌಳಿ ಬಾಹುಬಲಿ ಚಿತ್ರದಲ್ಲಿ ತಮ್ಮ ಸಂಪೂರ್ಣ ಗಮನ ತೊಡಗಿಸಿಕೊಂಡಿದ್ದರು. ಹೀಗಾಗಿ ನಮ್ಮ ಚಿತ್ರವನ್ನು ನಿರ್ದೇಶನ ಮಾಡಲು ಹಿಂದೇಟು ಹಾಕಿದರು ಎಂದಿದ್ದಾರೆ.

ಇನ್ನು ವಿಜಯೇಂದ್ರ ಪ್ರಸಾದ್ ಇತ್ತೀಚಿಗಷ್ಟೆ ಭಜರಂಗಿ ಭಾಯಿಜಾನ್-2 ಸಿನಿಮಾದ ಬಗ್ಗೆ ಸುಳಿವು ನೀಡಿದ್ದಾರೆ. ಈ ಬಗ್ಗೆ ಸಲ್ಮಾನ್ ಖಾನ್ ಜೊತೆಯೂ ಮಾತನಾಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ. ಸದ್ಯದಲ್ಲೇ ಭಜರಂಗಿ ಭಾಯಿಜಾನ್-2 ಕೂಡ ಸೆಟ್ಟೇರುವ ಸಾಧ್ಯತೆ ಇದೆ. ಈ ಸಿನಿಮಾಗಾದರೂ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಾರಾ ಎಂದು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next