ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ರಾಮ್‌ಚರಣ್ ಮತ್ತು ಜೂ.ಎನ್‌ಟಿಆರ್ ಅಭಿನಯದ “ಆರ್‌ಆರ್‌ಆರ್’ ಸಿನಿಮಾ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದ್ದು ಗೊತ್ತೇ ಇದೆ.
Advertisement
ಈಗ “ಆರ್‌ಆರ್‌ಆರ್-2′ ಚಿತ್ರದ ಕುರಿತು ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರೇ ಮಾಹಿತಿ ನೀಡಿದ್ದಾರೆ.
“ನಮ್ಮ ತಂದೆ ವಿ.ವಿಜಯೇಂದ್ರ ಪ್ರಸಾದ್ ಅವರೊಂದಿಗೆ ಆರ್‌ಆರ್‌ಆರ್-2 ಕುರಿತು ಚರ್ಚಿಸಿದ್ದೇನೆ. ಅವರು ಕಥೆ ಬರೆಯಲು ಆರಂಭಿಸಿದ್ದಾರೆ’ ಎಂದು ಸಂದರ್ಶನವೊಂದರಲ್ಲಿ ರಾಜಮೌಳಿ ಹೇಳಿದ್ದಾರೆ.