ಚೆನ್ನೈ: ರಾಜ ರಾಜ ಚೋಳ ಅವರ ಜನ್ಮ ಜಯಂತಿಯನ್ನು ಪ್ರತಿ ವರ್ಷ ನ.3ರಂದು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.
Advertisement
ರಾಜ ರಾಜ ಚೋಳ ಅವರು ಚೋಳ ಸಾಮ್ರಾಜ್ಯದ ಖ್ಯಾತ ಮಹಾರಾಜರಾಗಿದ್ದರು. ಇವರ ಕಾಲದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿದ್ದು, ಅನೇಕ ಪ್ರಮುಖ ಯುದ್ಧಗಳಲ್ಲಿ ಅವರು ಜಯಗಳಿಸಿದ್ದಾರೆ.
ರಾಜ ರಾಜ ಚೋಳ ಅವರ ಜೀವನವನ್ನು ಆಧರಿಸಿ ಖ್ಯಾತ ನಿರ್ದೇಶಕ ಮಣಿರತ್ನಂ ಅವರ “ಪೊನ್ನಿಯನ್ ಸೆಲ್ವನ್ 1′ ಸಿನಿಮಾ ಇತ್ತೀಚೆಗೆ ಬಿಡಿಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸುತ್ತಿದೆ. ಇದೇ ಸಮಯದಲ್ಲಿ ತಮಿಳುನಾಡು ಸರ್ಕಾರದಿಂದ ಈ ನಿರ್ಧಾರ ಪ್ರಕಟವಾಗಿದೆ.