Advertisement

ಕುಂದ್ರಾರಿಂದ ಪೊಲೀಸರಿಗೆ ಲಂಚ ನೀಡಿಕೆ ಆರೋಪ: 25 ಲಕ್ಷ ರೂ. ಲಂಚ ಆಮಿಷ?

12:02 AM Jul 23, 2021 | Team Udayavani |

ಮುಂಬಯಿ: ಅಶ್ಲೀಲ ಚಲನಚಿತ್ರ ನಿರ್ಮಾಣದ ಆರೋಪಕ್ಕೆ ಗುರಿಯಾಗಿ ಬಂಧನಕ್ಕೀಡಾಗಿರುವ ಉದ್ಯಮಿ ರಾಜ್‌ ಕುಂದ್ರಾ,  ಸಂಭಾವ್ಯ ಬಂಧನ ತಪ್ಪಿಸಿ ಕೊಳ್ಳಲು ಮುಂಬಯಿಯ ಕ್ರೈಮ್‌ ಬ್ರ್ಯಾಂಚ್‌ನ ಕೆಲವು ಪೊಲೀಸ್‌ ಅಧಿಕಾರಿಗಳಿಗೆ 25 ಲಕ್ಷ ರೂ. ಲಂಚವನ್ನೂ ನೀಡಿದ್ದರೆಂಬ ಗುರುತರ ಆರೋಪ ಕೇಳಿಬಂದಿವೆ.

Advertisement

ಈ ಪ್ರಕರಣದ ಕಿಂಗ್‌ಪಿನ್‌ ಎಂದು ಹೆಸರಿಸಲಾಗಿರುವ ಅರವಿಂದ ಶ್ರೀವಾಸ್ತವ ಅಲಿಯಾಸ್‌ ಯಶ್‌ ಠಾಕೂರ್‌, ತಮ್ಮ ಕಂಪೆನಿಯಾದ ಅಮೆರಿಕ ಮೂಲದ ಫ್ಲಿಜ್‌ ಮೂವೀಸ್‌ (ಈ ಹಿಂದೆ ಈ ಕಂಪೆನಿಯ ಹೆಸರು ನ್ಯೂಫ್ಲಿಕ್ಸ್‌) ಹೆಸರಿನಲ್ಲಿ ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಇ-ಮೇಲ್‌ ಮೂಲಕ ಈ ಆರೋಪ ಮಾಡಿದ್ದರು. ಎಸಿಬಿಯು ಇದನ್ನು ಮುಂಬಯಿ ಪೊಲೀಸ್‌ ಆಯುಕ್ತರಿಗೆ ರವಾನಿಸಿತ್ತು ಎಂದು ಮೂಲಗಳು ತಿಳಿಸಿವೆ.  ಇದೇ ವೇಳೆ, ಶುಕ್ರವಾರ ಅವರ ಪೊಲೀಸ್‌ ಕಸ್ಟಡಿ ಮುಕ್ತಾಯವಾಗಲಿದೆ

ವೀಡಿಯೋಗಳ ತನಿಖೆ: ಈ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿರುವ 70 ಅಶ್ಲೀಲ ವೀಡಿಯೋಗಳು ಹಾಗೂ 20ರಿಂದ 30 ನಿಮಿಷ ಅವಧಿಯ 90 ವೀಡಿಯೋಗಳು ನಿಜವಾಗಿಯೂ ಕುಂದ್ರಾ ಸೂಚನೆಯ ಮೇರೆಗೆ, ಅವರ “ಹಾಟ್‌ಶಾಟ್ಸ್‌’ ಆ್ಯಪ್‌ಗಾಗಿ ನಿರ್ಮಾಣವಾದವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇವುಗಳನ್ನು ತಯಾರಿಸಿದ ಅಲ್ಪಾವಧಿ ಪ್ರೊಡಕ್ಷನ್‌ ಹೌಸ್‌ಗಳನ್ನೂ ತಪಾಸಣೆ ಗೊಳಪಡಿಸಲಾಗಿದೆ ಎಂದು ಮುಂಬಯಿ ಪೊಲೀಸರು ತಿಳಿಸಿದ್ದಾರೆ.

ಮತ್ತೂಂದೆಡೆ, ನಟಿ ಶೆರ್ಲಿನ್‌ ಚೋಪ್ರಾ ಅವರು, ಕುಂದ್ರಾ ಪ್ರಕರಣದಲ್ಲಿ ಮಹಾರಾಷ್ಟ್ರ ಸೈಬರ್‌ ಸೆಲ್‌ಗೆ ತಾವೇ ಮೊದಲ ಹೇಳಿಕೆ ನೀಡಿದ್ದಾಗಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next