ರಾಜ್‌ಕುಮಾರ್ ಗುಣವೇ ಅಂತಹುದು. ಎಲ್ಲರನ್ನು ಗೌರವದಿಂದ ನಡೆಸಿಕೊಳ್ಳಬೇಕು, ಯಾರ ಮನಸ್ಸನ್ನೂ ನೋಯಿಸಬಾರದು, ಒಳ್ಳೆಯ ವಿಚಾರಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹ ನೀಡಬೇಕೆಂಬ ಗುಣ ಹೊಂದಿದ್ದವರು ರಾಜ್. ತಮ್ಮ ಜೊತೆಗಿನ ಸಹ ಕಲಾವಿದರನ್ನು ತುಂಬಾ ಗೌರವ ಪೂರ್ವಕವಾಗಿ ನಡೆಸಿಕೊಳ್ಳುತ್ತಿದ್ದರು. ತಮ್ಮ ಜೊತೆಗಿನ ಕಲಾವಿದರು ತುಂಬಾ ಚೆನ್ನಾಗಿ ನಟಿಸಿದರೆ ಶಾಟ್ ಮುಗಿದ ಕೂಡಲೇ ಅವರ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಹೀಗೆ ರಾಜ್ ತಮ್ಮ ಸಹ ಕಲಾವಿದರನ್ನು ಚೆನ್ನಾಗಿ ನಡೆಸಿಕೊಂಡ ಬಗ್ಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.
“ಎರಡು ಕನಸು’ ಚಿತ್ರದಲ್ಲಿನ ಕಲ್ಪನಾ ಅವರ ಅಭಿನಯ ನೋಡಿದ ರಾಜ್ ಅವರು ಮುಕ್ತ ಕಂಠದಿಂದ ಶ್ಲಾಸಿದರಂತೆ. ರಾಜ್ ಅವರ ಹೊಗಳಿಕೆ ಯಿಂದ ಭಾವುಕರಾಗಿ ಅತ್ತೆ ಬಿಟ್ಟರಂತೆ ಕಲ್ಪನಾ. ಇದು ಒಂದು ಸಣ್ಣ ಉದಾಹರಣೆಯಷ್ಟೇ.
ಇದನ್ನೂ ಓದಿ:10ನೇ ತರಗತಿ ಎಕ್ಸಾಂ ಕ್ಯಾನ್ಸಲ್ ಮಾಡಿ: ವಿದ್ಯಾರ್ಥಿಗಳ ಪರ ಪ್ರಿಯಾಮಣಿ ಬ್ಯಾಟಿಂಗ್
ತಮ್ಮ ಜೊತೆ ನಟಿಸುವ ಯಾರೇ ಕಲಾವಿದರಾಗಿದ್ದರೂ ಅವರನ್ನು ಸಮಾನವಾಗಿ ನೋಡಬೇಕೆಂಬ ಮನೋಭಾವವನ್ನು ಹೊಂದಿದ್ದವರು ರಾಜ್. ಜೊತೆಗೆ ಅವರ ಕಾಲದ ನಟರಾದ ವಜ್ರಮುನಿ, ತೂಗುದೀಪ ಶ್ರೀನಿವಾಸ್, ನರ ಸಿಂಹರಾಜು … ಹೀಗೆ ಅನೇಕ ನಟರನ್ನು ತಮ್ಮ ಸಿನಿಮಾಗಳಿಗೆ ಆಯ್ಕೆ ಮಾಡುವಂತೆ ನಿರ್ದೇಶಕರಿಗೆ ಹೇಳುವ ಮೂಲಕ ಎಲ್ಲರನ್ನು ಜೊತೆ ಜೊತೆಗೆ ಕರೆದುಕೊಂಡು ಹೋಗುವ ಮನಸ್ಥಿತಿ ರಾಜ್ ಅವರದ್ದಾಗಿತ್ತು.
ಇದನ್ನೂ ಓದಿ: ರಚಿತಾ ರಾಮ್ ಈಗ ‘ಶಬರಿ’: ರಗಡ್ ಲುಕ್‌ನಲ್ಲಿ ಡಿಂಪಲ್ ಕ್ವೀನ್