Advertisement

ರಾಜಭವನ ಪರ್ಯಾಯ ಶಕ್ತಿಕೇಂದ್ರವಲ್ಲ: ನಾಯ್ಡು

03:15 AM Jun 06, 2018 | Team Udayavani |

ಹೊಸದಿಲ್ಲಿ: ರಾಜಭವನಗಳು ಅಧಿಕಾರದ ಪರ್ಯಾಯ ಕೇಂದ್ರಗಳಲ್ಲ. ರಾಜ್ಯಪಾಲರು ರಾಜ್ಯಗಳ ಅಭಿವೃದ್ಧಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ. ರಾಜ್ಯಪಾಲರ ಸಮ್ಮೇಳನದಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜಕೀಯ ಹಾಗೂ ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿ ರಾಜ್ಯಪಾಲರು ಯಾವತ್ತೂ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹೊರಹಾಕುವುದು, ಸುದ್ದಿಗೋಷ್ಠಿ ನಡೆಸುವುದು ಅಥವಾ ಟ್ವೀಟ್‌ ಮಾಡುವಂಥ ಕೆಲಸ ಮಾಡಬಾರದು. ಪ್ರಧಾನಿ ಮೋದಿ ಅವರ “ಸುಧಾರಣೆ, ಸಾಧನೆ ಮತ್ತು ಬದಲಾವಣೆ’ಯ ಸಲಹೆಯನ್ನು ಎಲ್ಲರೂ ಅನುಸರಿಸಬೇಕು ಎಂದೂ ಸಲಹೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next