Advertisement
ಕ್ರೌನ್ ಬ್ರೈಡೆಡ್ ಬನ್ಮೊದಲಿಗೆ ಕೂದಲನ್ನು ಬಾಚಿ, ಹೈಪೋನಿ ಕಟ್ಟಿಕೊಳ್ಳಬೇಕು. ಅದಾದ ಮೇಲೆ ಕೂದಲನ್ನು ಮೂರು ಸಮ ಭಾಗಗಾಗಿ ವಿಂಗಡಿಸಿ, ಜಡೆ ಹೆಣೆದುಕೊಳ್ಳಿ. ಆ ಜಡೆಯನ್ನು ಹಣೆಗೆ ಒಂದು ಸುತ್ತು ಸುತ್ತಿ, ಹೈಪೋನಿ ಕಟ್ಟಿಕೊಂಡಲ್ಲಿ ಹೇರ್‌ಪಿನ್ ಸಹಾಯದಿಂದ ಪಿನ್ ಮಾಡಿ. ಈ ವಿನ್ಯಾಸ, ಉದ್ದ ಕೂದಲಿಗೆ ಹೆಚ್ಚು ಸೂಕ್ತ.
ಕೂದಲನ್ನು ಚೆನ್ನಾಗಿ ಬಾಚಿ, ಪೂರ್ತಿ ಕೂದಲನ್ನು ಒಟ್ಟುಗೂಡಿಸಿ ಮೂರು ಅಥವಾ ನಾಲ್ಕು ಸುತ್ತು ಸುತ್ತಿಕೊಂಡು, ಕುತ್ತಿಗೆಯ ಸ್ವಲ್ಪವೇ ಮೇಲೆ, ಎರಡೂ ಕಿವಿಗಳ ಮಧ್ಯದಲ್ಲಿ ಸಮನಾಗಿ ಕ್ಲಿಪ್‌ಗ್ಳ ಸಹಾಯದಿಂದ ಬನ್ ಶೇಪ್‌ನಲ್ಲಿ ಟಕ್ ಮಾಡುವ ಈ ಸ್ಟೈಲ್ ಮಳೆಗಾಲಕ್ಕೆ ಸೂಕ್ತ. ಸೈಡ್ ಫ್ರೆಂಚ್ ಪ್ಲೀಟೆಡ್ ಬನ್
ಕೂದಲನ್ನು ಸೈಡ್‌ನಲ್ಲಿ ಭಾಗ ಮಾಡಿಕೊಂಡು, ಹೆಚ್ಚು ಕೂದಲಿರುವ ಭಾಗದಲ್ಲಿ ಮತ್ತೆ ಮೂರು ಭಾಗ ಮಾಡಿ, ಫ್ರೆಂಚ್ ಪ್ಲೇಟ್ ಹಾಕಿ ರಬ್ಬರ್ ಬ್ಯಾಂಡ್‌ನಿಂದ ಕಟ್ಟಿ. ಉಳಿದ ಕೂದಲನ್ನು ಅದೇ ಸೈಡ್ ಬಾಚಿಕೊಂಡು ಬನ್ ಹಾಕಿಕೊಳ್ಳಿ.
Related Articles
ಕೂದಲನ್ನು ಚೆನ್ನಾಗಿ ಬಾಚಿಕೊಂಡು, ತಲೆಯ ಕೆಳಭಾಗದಿಂದ ಸರಿಯಾಗಿ ಎರಡು ಭಾಗ ಮಾಡಿಕೊಂಡು, ಎರಡು ಜಡೆ ಹಾಕಿಕೊಳ್ಳಿ. ಈ ಜಡೆಗಳಿಂದ ತಲೆಯ ನಡುಭಾಗದಲ್ಲಿ ಬಿಗಿಯಾಗಿ ಗಂಟು ಹಾಕಿಕೊಳ್ಳಿ. ಈ ಗಂಟು ಗಟ್ಟಿಯಾಗಿರಲು ಹೇರ್‌ಪಿನ್ ಅನ್ನು ಹಾಕಿ. ಉಳಿದ ಕೂದಲನ್ನು ಗಂಟು ಹಾಕಿಕೊಂಡ ಕೂದಲಿಗೆ ಕ್ಲಾಕ್‌ವೆçಸ್ ಆಗಿ ಜೋಡಿಸಿಕೊಳ್ಳಬೇಕು. ಎಲ್ಲ ಕೂದಲನ್ನು ಜೋಡಿಸಿಕೊಂಡ ನಂತರ ಹೇರ್‌ಪಿನ್‌ನಿಂದ ಭದ್ರಗೊಳಿಸಿ.
Advertisement
ಪ್ರಟ್ಜೆಲ್ ಬನ್ಕೂದಲನ್ನು ಬಾಚಿಕೊಂಡು, ಎರಡರಿಂದ ಮೂರು ಸುತ್ತು ಸುತ್ತಿ, ಕಿವಿಯ ಹತ್ತಿರ ಒಂದು ಬದಿಯಲ್ಲಿ ಲೂಸ್/ಮೆಸ್ಸಿಯಾಗಿ ಬನ್ ಹಾಕಿಕೊಳ್ಳಬೇಕು. ಹಣೆಯಿಂದ/ಕೆನ್ನೆಯ ಬದಿಯಿಂದ ಒಂದೊಂದು ಕೂದಲನ್ನು ಕರ್ಲ್ ಮಾಡಿಕೊಂಡು ಟೈ ಮಾಡದೆ ಹಾಗೇ ಬಿಡಬೇಕು. ಟ್ರೈ ಟ್ವಿಟ್ಟೆಡ್ ಪೋನಿ ಬನ್
ಕೂದಲನ್ನು ಮೂರು ಪಾಲು ಮಾಡಿ. ಮೂರು ಪಾಲನ್ನೂ ಟ್ವಿಸ್ಟ್ ಮಾಡಿ ಹೇರ್‌ಪಿನ್ ಸಹಾಯದಿಂದ ಮೂರು ಸ್ಟೆಪ್ ಜಡೆ ಹೆಣೆದು, ಪೋನಿಟೇಲ್ ಹಾಕಿಕೊಳ್ಳಬೇಕು. ನಂತರ ಅದೇ ಪೋನಿಯನ್ನು ಬನ್ ಮಾಡಿಕೊಳ್ಳಬೇಕು. – ಮೇಘನಾ ಮಂಗಳೂರು