Advertisement

ರಾಜ್ಯದ ವಿವಿಧೆಡೆ ಮಳೆ: ಮನೆ, ಕೃಷಿಗೆ ಅಪಾರ ಹಾನಿ

12:05 AM May 13, 2023 | Team Udayavani |

ಬೆಂಗಳೂರು: ರಾಜ್ಯದ ವಿವಿಧೆಡೆ ಗುರುವಾರ ರಾತ್ರಿ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಧಾರವಾಡದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲೇ ನೀರು ಹರಿದು ವಾಹನ ಸವಾರರು ಪರದಾಡುವಂತಾಯಿತು.

Advertisement

ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನ ಹಲವೆಡೆ ಗುರುವಾರ ರಾತ್ರಿ ಬಿದ್ದ ಗಾಳಿ, ಮಳೆಗೆ ರಾಜೇಗೌಡನಹುಂಡಿ ಗ್ರಾಮದ 3 ಮನೆಗಳ ಛಾವಣಿ ಹಾರಿಹೋಗಿವೆ. ಹಲವು ಮರಗಳು ಮತ್ತು ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಶಂಭೂಗೌಡ ಅವರ ಮನೆಯಲ್ಲಿದ್ದ 2 ತಿಂಗಳ ಬಾಣಂತಿ ತಲೆ ಮೇಲೆ ಮನೆಯ ಛಾವಣಿ ಶೀಟ್‌ ಬಿದ್ದು ಗಾಯಗಳಾಗಿವೆ. ತಾಲೂಕಿನ ಕಟ್ಟೆಮನುಗನಹಳ್ಳಿಯಲ್ಲಿಯೂ 2 ಮನೆಗಳ ಛಾವಣಿ ಹಾರಿಹೋಗಿರುವ ಮಾಹಿತಿಯಿದೆ.

6 ಎಕರೆ ಬಾಳೆ ಬೆಳೆ ಸಂಪೂರ್ಣ ನಾಶ
ಚಾಮಗಾಜನಗರ ಜಿಲ್ಲೆ ಕೊಳ್ಳೇ ಗಾಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಾಳೆ ಬೆಳೆಗೆ ಹಾನಿಯಾಗಿದ್ದು, ಕೆಲವು ಮನೆಗಳ ಗೋಡೆ ಕುಸಿದಿದೆ.
ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ, ಹೆಗ್ಗವಾಡಿ, ಕರಕಲಮಾದಹಳ್ಳಿ, ಯರಿಯೂರು, ಗುಡಿಮನೆ, ಕೊಡಸೋಗೆ ಸೇರಿದಂತೆ ಇನ್ನಿತರ ಕಡೆ ಬಾಳೆ ಫ‌ಸಲು ನಾಶವಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ದಾರಿ ಬೇಗೂರು ಗ್ರಾಮದಲ್ಲೂ ಸುಮಾರು 4 ಎಕ್ರೆಯಷ್ಟು ಬಾಳೆ ಬೆಳೆ ಹಾನಿಗೀಡಾಗಿ ನಷ್ಟ ಉಂಟಾಗಿದೆ.

ಸಿಡಿಲು: ಇಬ್ಬರು ಸಾವು
ಮದ್ದೂರು: ಸಿಡಿಲು ಬಡಿದು ಮಹಿಳೆ ಹಾಗೂ ಯುವಕ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ತಾಲೂಕಿನ ಶಿವಪುರ ನಿವಾಸಿ ಗೌರಮ್ಮ (58) ಮೃತಪಟ್ಟವರು. ಸಿಡಿಲು ಬಡಿದು ತಮ್ಮ ಮನೆ ಬಳಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಅಸುನೀಗಿದ್ದಾರೆ.

Advertisement

ಕುಕನೂರಿನಲ್ಲಿ ಯುವಕ ಸಾವು
ಕುಕನೂರು ತಾಲೂಕಿನ ವೀರಾಪೂರ ಗ್ರಾಮದಲ್ಲಿ ಸಂಭವಿ ಸಿದ ಮತ್ತೂಂದು ಘಟನೆಯಲ್ಲಿ, ಭಾರೀ ಗಾಳಿ-ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದ ಮಲ್ಲೇಶ ಗಾಳೆಪ್ಪ ವೀರಾಪೂರ (25) ಎಂಬವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next