Advertisement

24.6 ಮಿಮೀ ಮಳೆ; 60 ಹೆಕ್ಟೇರ್‌ ಬೆಳೆ ಹಾನಿ

05:23 PM May 20, 2022 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ 24.6 ಮಿ.ಮೀ ಮಳೆಯಾಗಿದೆ. ವಾಡಿಕೆಯಂತೆ 9 ಮಿಲಿ ಮೀಟರ್‌ ಆಗಬೇಕಾಗಿತ್ತು. ಆದರೆ ಈ ಬಾರಿ 15.6 ಮಿ.ಮೀ ಹೆಚ್ಚಾಗಿದೆ.

Advertisement

ಇದರಿಂದಾಗಿ ತೋಟಗಾರಿಕೆ ಬೆಳೆಗಳಾದ ಬಾಳೆ, ಕಲ್ಲಂಗಡಿ, ಈರುಳ್ಳಿ, ಟೊಮ್ಯಾಟೋ ಸೇರಿದಂತೆ ಇತರೆ ಬೆಳೆಗಳಿಗೆ ಹಾನಿಯಾಗಿದ್ದು, ಒಟ್ಟು 60 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ತೋಟಗಾರಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.

ಜಿಲ್ಲೆಯ ಅಫಜಲಪುರ, ಆಳಂದ ತಾಲೂಕಿನಲ್ಲಿ ತಲಾ 30.5 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿಯೇ ಹೆಚ್ಚು. ಇನ್ನುಳಿದಂತೆ ಕಳೆದ 24 ಗಂಟೆಯಲ್ಲಿ (ಮೇ 19) ಚಿತ್ತಾಪುರದಲ್ಲಿ 6.3 ಮಿ.ಮೀ, ಜೇವರ್ಗಿಯಲ್ಲಿ 8.2 ಮಿ.ಮೀ, ಕಾಳಗಿ 4 ಮಿ.ಮೀ, ಶಹಾಬಾದ 4.5 ಮಿ.ಮೀ ಮಳೆಯಾಗಿದೆ. ಮೂರು ತಾಲೂಕು ಹೊರತು ಪಡಿಸಿ ಕಲಬುರಗಿ, ಆಳಂದ, ಅಫಜಲಪುರ, ಸೇಡಂ, ಚಿಂಚೋಳಿಯಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ.

ಬಿರುಗಾಳಿಗೆ 60 ಹೆಕ್ಟೇರ್‌ ಬೆಳೆ ಹಾನಿ: ಮಳೆಗಿಂತ ಬಿರುಗಾಳಿ ಹೊಡೆತಕ್ಕೆ ಭಾರಿ ಅನಾಹುತ ಉಂಟಾಗಿದೆ. ಒಟ್ಟು 60 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದೆ. ಪಪ್ಪಾಯಿ ಮತ್ತು ಬಾಳೆ ಬೆಳೆಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ.

Advertisement

ಅಲ್ಲಲ್ಲಿ ಈರುಳ್ಳಿ, ಟೊಮ್ಯಾಟೋ ಮತ್ತು ಕಲ್ಲಂಗಡಿ ಬೆಳೆಗೂ ಹೊಡೆತ ಬಿದ್ದಿದೆ. ಚಿಂಚೋಳಿ, ಅಫಜಲಪುರ, ಆಳಂದ ತಾಲೂಕಿನಲ್ಲಿ ಬಾಳೆ, ಪಪ್ಪಾಯಿ ಬೆಳೆಗಳು ಹೆಚ್ಚು ಹಾನಿಗೊಳಗಾಗಿವೆ. ಕಲಬುರಗಿ ನಗರದಲ್ಲಿ ಎತ್ತರ ಪ್ರದೇಶದಲ್ಲಿನ ಮನೆಗಳ ಮೇಲ್ಚಾವಣಿ ಹಾರಿ ಹೋಗಿವೆ.

ಅದಲ್ಲದೆ, 18ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸಿಡಿಲಿಗೆ 8ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಪ್ರಸಕ್ತ ಸಾಲಿನಲ್ಲಿ 60.7 ಮಿ.ಮೀ ಮಳೆ: ಜಿಲ್ಲೆಯಲ್ಲಿ ಸರಾಸರಿಯಾಗಿ 60.7 ಮಿ.ಮೀ ಮಳೆಯಾಗಿದೆ. ವಾಡಿಕೆಯಂತೆ 50.7 ಮಿ.ಮೀ ಮಳೆಯಾಗಬೇಕಿತ್ತು. ಆಳಂದದಲ್ಲಿ 71.4 ಮತ್ತು ಚಿತ್ತಾಪುರದಲ್ಲಿ 71.5 ಮಿ.ಮೀ ಮಳೆಯಾಗಿದೆ. ಬಹುತೇಕ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪ್ರತಿ ತಾಲೂಕಿನಲ್ಲಿ 50 ಮಿ.ಮೀ ಮಳೆಯಾಗಿದೆ.

ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಬಿದ್ದಿರುವ ಮಳೆಗೆ ಒಟ್ಟು 60 ಹೆಕ್ಟೇರ್‌ನಲ್ಲಿದ್ದ ಬೆಳೆ ಹಾನಿಗೊಳಗಾಗಿದೆ. ಪಪ್ಪಾಯಿ, ಬಾಳೆ ಬೆಳೆಗೆ ಹೆಚ್ಚಿನ ಹಾನಿಯಾಗಿದೆ. ಕೂಡಲೇ ಸಮೀಕ್ಷೆ ಮಾಡಲಾಗುವುದು. ಇನ್ನೆರಡರು ದಿನ ಮಳೆ ಬೀಳುವ ಸಾಧ್ಯತೆ ಇದೆ. ಮಳೆಗಿಂತ ಬಿರುಗಾಳಿಯಿಂದಲೇ ಹೆಚ್ಚು ಹಾನಿಯಾಗಿದೆ. ಪ್ರಭುರಾಜ ಹಿರೇಮಠ, ಡಿಡಿ, ತೋಟಗಾರಿಕೆ    

ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next