Advertisement
ಹವಾಮಾನ ಇಲಾಖೆಯು ದೇಶಾದ್ಯಂತ 36 ಉಪವಿಭಾಗಗಳನ್ನು ಹೊಂದಿದೆ. ಈ ಪೈಕಿ 25ರಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಇದೆ. ಅದರಲ್ಲೂ ಆರು ಉಪವಿಭಾಗಗಳಲ್ಲಿ ಭಾರೀ ಮಳೆ ಕೊರತೆ ದಾಖಲಾಗಿದೆ. ಒಡಿಶಾ, ಲಕ್ಷದ್ವೀಪದಲ್ಲಿ ಸಾಮಾನ್ಯ, ಜಮ್ಮು ಕಾಶ್ಮೀರ, ಉತ್ತರ ರಾಜಸ್ಥಾನದಲ್ಲಿ ಹೆಚ್ಚುವರಿ ಮಳೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವಿಪರೀತ ಹೆಚ್ಚಿನ ಮಳೆಯಾಗಿದೆ. ಆದರೆ ಮಹಾರಾಷ್ಟ್ರದ ವಿದರ್ಭ, ಮರಾಠವಾಡ ಮತ್ತು ಕೇಂದ್ರ ಮಹಾರಾಷ್ಟ್ರ, ಪೂರ್ವ ಮಧ್ಯಪ್ರದೇಶ ಭಾಗದಲ್ಲಿ ತೀರಾ ಕಡಿಮೆ ಮಳೆಯಾಗಿದೆ.
ರಾಜಸ್ಥಾನ ಮತ್ತು ಬಿಹಾರದಲ್ಲಿ ಮಳೆ ಸಂಬಂಧಿ ದುರಂತದಲ್ಲಿ 24 ಮಂದಿ ಅಸುನೀಗಿ, ಮಧ್ಯ ಪ್ರದೇಶದಲ್ಲಿ ಇಬ್ಬರು ಬಲಿಯಾಗಿದ್ದಾರೆ. 50 ಮಂದಿ ಗಾಯಗೊಂಡಿದ್ದಾರೆ. ರಾಜಸ್ಥಾನದ ಬಾರ್ಮರ್ ಜಸೋಲ್‌ನಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಪೆಂಡಾಲ್ ಹಾಕಲಾಗಿತ್ತು. ಆಗ ಜೋರಾಗಿ ಗಾಳಿ ಬೀಸಿ, ಕುಳಿತಿದ್ದವರ ಮೇಲೆಯೇ ಪೆಂಡಾಲ್ ಕುಸಿದಿದ್ದರಿಂದ 14 ಮಂದಿ ಅಸುನೀಗಿ, 50 ಮಂದಿ ಗಾಯಗೊಂಡಿದ್ದಾರೆ. ಬಿಹಾರದ ಬಕ್ಸಾರ್, ಬೆಗುಸರೈನಲ್ಲಿ ಮಳೆಗೆ 10 ಮಂದಿ ಸಾವ ನ್ನಪ್ಪಿದ್ದಾ ರೆ. ಅಸುನೀಗಿದವರಿಗೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.