Advertisement

ರೈನ್‌ಕೋಟ್‌ ರಾಣಿ

06:00 AM Jun 20, 2018 | |

ಹಿಂದೆಲ್ಲ ರೈನ್‌ಕೋಟ್‌ ಅಂದ್ರೆ ಮಕ್ಕಳಿಗಷ್ಟೇ ಸೀಮಿತವಾದ ಮಳೆಗಾಲದ ರಕ್ಷಕವಸ್ತ್ರವಾಗಿತ್ತು. ಆದರೆ, ಈಗ ಹಾಗಿಲ್ಲ. ಯುವಕ- ಯುವತಿಯರಿಗಾಗಿ ಸ್ಟೈಲಿಶ್‌ ರೈನ್‌ಕೋಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ರೈನ್‌ಕೋಟ್‌ ಧರಿಸುವುದೂ ಒಂದು ಫ್ಯಾಶನ್‌…

Advertisement

ರೈನ್‌ಕೋಟ್‌, ನಮಗೆ ಹೊಸತೇನಲ್ಲ. ಚಿಕ್ಕವರಿದ್ದಾಗ ಮಳೆಗಾಲದಲ್ಲಿ ಚಂದದ ರೈನ್‌ಕೋಟ್‌ ಧರಿಸಿ ಶಾಲೆಗೆ ಹೋಗುವುದೇ ದೊಡ್ಡ ಸಂಭ್ರಮವಾಗಿತ್ತು. ದೊಡ್ಡವರಾದಂತೆ ರೈನ್‌ಕೋಟ್‌ ಬದಲಿಗೆ ಛತ್ರಿ ಹಿಡಿದೆವು. ಛತ್ರಿಯಿಂದ ತಲೆಯಷ್ಟೇ ಒ¨ªೆಯಾಗದೆ ಉಳಿಯುತ್ತದೆ. ಕೈಯಲ್ಲಿರುವ ಬ್ಯಾಗ್‌, ಬಟ್ಟೆ , ವಾಚ್‌ ಮತ್ತಿತರ ಆಕ್ಸೆಸರೀಸ್‌ಗಳೆಲ್ಲ ಒ¨ªೆಯಾಗುವ ಅಪಾಯವಿರುತ್ತದೆ. ಅದರಲ್ಲೂ, ಆಫೀಸ್‌ಗೆ ಹೋಗುವಾಗ ಲ್ಯಾಪ್‌ಟಾಪ್‌ ಒದ್ದೆಯಾಗಬಾರದೆಂದು, ಹೆಚ್ಚಿನವರು ಛತ್ರಿಗಳಿಗಿಂತ ರೈನ್‌ಕೋಟ್‌ಗಳನ್ನೇ ಆಯ್ಕೆ ಮಾಡುತ್ತಾರೆ.

ಸ್ಟೈಲಿಶ್‌ ರೈನ್‌ಕೋಟ್‌
ಹಿಂದೆಲ್ಲಾ ಬರೀ ಕಪ್ಪು, ಕಂದು, ನೀಲಿ ಅಥವಾ ಹಸಿರು ಬಣ್ಣಗಳ ರೈನ್‌ಕೋಟ್‌ಗಳು ಸಿಗುತ್ತಿದ್ದವು. ಅದಾದ ಬಳಿಕ ಪಾರದರ್ಶಕ ರೈನ್‌ಕೋಟ್‌ಗಳು ಬಂದವು. ನಂತರ ಪಾರದರ್ಶಕ ರೈನ್‌ಕೋಟ್‌ಗಳ ಮೇಲೆ ಚಿಕ್ಕ ಪುಟ್ಟ ಆಕೃತಿಗಳು ಮೂಡಿದವು. ಚಿಟ್ಟೆ, ಹೂವು, ಚಂದಿರ, ನಕ್ಷತ್ರ, ಮೋಡ, ಮಳೆಬಿಲ್ಲು, ಸೂರ್ಯ, ಹಕ್ಕಿ… ಹೀಗೆ ಮಕ್ಕಳಿಗೆ ಇಷ್ಟವಾಗುವ ಚಿತ್ತಾರಗಳು ಮೂಡಲು ಶುರುವಾದವು. ಆದರೀಗ ರೈನ್‌ಕೋಟ್‌ ಮಕ್ಕಳಿಗೆ ಮಾತ್ರ ಸೀಮಿತವಾಗಿ ಉಳಿಯದ ಕಾರಣ, ಯುವಕ-ಯುವತಿಯರಿಗಾಗಿ ಸ್ಟೈಲಿಶ್‌ ರೈನ್‌ಕೋಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ರೈನ್‌ಕೋಟ್‌ ಅಲ್ಲ ಜ್ಯಾಕೆಟ್‌
ಕೇವಲ ಒಂದೇ ಬಣ್ಣ ಅಥವಾ ಚೆಕ್ಸ್ ಡಿಸೈನ್‌ ಅಲ್ಲದೆ ಫ್ಲೋರಲ್‌ ಪ್ರಿಂಟ್‌, ಅಂದರೆ ಹೂವಿನ ಆಕೃತಿ ಉಳ್ಳ ವಿನ್ಯಾಸ, ಇಂಡಿಯನ್‌ (ಸಾಂಪ್ರದಾಯಿಕ) ಪ್ರಿಂಟ್‌, ಕ್ಯಾಮೊಫ್ಲಾಜ್‌ ಅಂದರೆ ಸೈನಿಕರ ಉಡುಪಿನ ಮಾದರಿಯ ಬಟ್ಟೆಯ ವಿನ್ಯಾಸ, ಪೋಲ್ಕಾ ಡಾಟ್ಸ್‌, ಜಾಮೆಟ್ರಿಕ್‌ ಡಿಸೈನ್‌ (ಜ್ಯಾಮಿತಿಯ ವಿನ್ಯಾಸ), ಐಸ್‌ಕ್ರೀಮ…, ಸ್ಕೂಟರ್‌, ಕುದುರೆ, ಕರಡಿ, ಬೆಕ್ಕಿನ ಮರಿ, ದಿನಪತ್ರಿಕೆಯ ವಿನ್ಯಾಸ ಮತ್ತು ಚಿತ್ರಗಳು ಕೂಡ  ರೈನ್‌ಕೋಟ್‌ಗಳಲ್ಲಿ ಮೂಡಿಬಂದಿವೆ. ಇಷ್ಟೊಂದು ಸ್ಟೈಲಿಶ್‌ ಆಯ್ಕೆಗಳಿರುವ ಕಾರಣ, ಇವುಗಳನ್ನು ಜಾಕೆಟ್‌ನಂತೆ ಉಡುಪಿನ ಮೇಲೆಯೂ ತೊಡಬಹುದು. ಬಣ್ಣ ಬಣ್ಣದ ಬಟ್ಟೆ ಮೇಲೆ ಪ್ಲೇನ್‌ ರೈನ್‌ಕೋಟ್‌ ತೊಟ್ಟರೆ, ಪ್ಲೇನ್‌ ಉಡುಗೆ ಮೇಲೆ ಬಣ್ಣ ಬಣ್ಣದ ರೈನ್‌ ಕೋಟ್‌ ತೊಡಲಾಗುತ್ತದೆ. ಬಟನ್‌ ಇರುವ ರೈನ್‌ಕೋಟ್‌ಗಳು, ಲಾಡಿ ಅಥವಾ ದಾರ ಇರುವ ರೈನ್‌ಕೋಟ್‌ಗಳು, ಜಿಪ್‌ ಇರುವ ರೈನ್‌ಕೋಟ್‌ಗಳು, ವೆಲೊ ಇರುವ ರೈನ್‌ಕೋಟ್‌ಗಳು… ಹೀಗೆ ವಿಭಿನ್ನ ಪ್ರಕಾರಗಳಿವೆ.

ನಟಿಯರಿಗೂ ಬೇಕು…
ಇನ್ನು ಕ್ಲಾಸಿಕ್‌ ಬ್ಲ್ಯಾಕ್‌ (ಕಪ್ಪು ಬಣ್ಣದ) ರೈನ್‌ಕೋಟ್‌ ಅನ್ನು ಫಾರ್ಮಲ್ಸ್‌ ಅಲ್ಲದೇ, ಯಾವುದೇ ದಿರಿಸಿನ ಜೊತೆಯೂ ತೊಡಬಹುದು. ಲೇಯರ್‌ನಂತೆಯೂ ತೊಡಬಹುದು. ಲೇಯರ್ಡ್‌ ರೈನ್‌ಕೋಟ್‌ ನೋಡಲು ಒಂದರ ಮೇಲೊಂದು ಕೋಟ್‌ ತೊಟ್ಟಂತೆ ಕಾಣುತ್ತದೆ. ಆದರೆ, ಅದು ಒಂದೇ ಕೋಟ್‌ ಆಗಿರುತ್ತದೆ. ಒಂದೇ ಕೋಟ್‌ನಲ್ಲಿ ಎರಡು ಅಥವಾ ಹೆಚ್ಚು ಪದರಗಳಿರುವ ಕಾರಣ, ಅವನ್ನು ಲೇಯರ್‌ (ಪದರ) ರೈನ್‌ಕೋಟ್‌ ಎಂದು ಕರೆಯಲಾಗುತ್ತದೆ. ಕಪ್ಪು- ಬಿಳಿಪು, ಕಪ್ಪು- ಕಂದು, ಕಪ್ಪು- ಹಸಿರು, ಕಂದು- ಹಸಿರು, ನೀಲಿ- ಕೆಂಪು ಹೀಗೆ ಬಗೆ-ಬಗೆಯ ಆಯ್ಕೆಗಳ ರೈನ್‌ಕೋಟ್‌ ಟ್ರೆಂಡ್‌ಗೆ ಸಿನಿಮಾ ನಟಿಯರೂ ಮಾರುಹೋಗಿದ್ದಾರೆ. 

Advertisement

ಸಿನಿಮಾದ ಪ್ರಮೋಷನ್‌, ಪ್ರಸ್‌ಮೀಟ್‌ ಅಲ್ಲದೆ ಸಿನಿಮಾಗಳಲ್ಲೂ ಈ ಶೈಲಿಯನ್ನು ಅಳವಡಿಸಿ, ಯುವತಿಯರನ್ನು ಅನುಕರಣೆಗೆ ಪ್ರೇರೇಪಿಸಿದ್ದಾರೆ. ರೈನ್‌ಕೋಟ್‌ನಿಂದ ಯಾವುದೇ ಸರಳ ಉಡುಪನ್ನು ಡಿಫ‌ರೆಂಟ್‌ ಆಗಿ ಪರಿವರ್ತಿಸಬಹುದು. ನೀವೂ ಸ್ಟೈಲಿಶ್‌ ಆಗಿರೋ ರೈನ್‌ಕೋಟ್‌ ಜೊತೆಗೆ ಮುಂಗಾರನ್ನು ಬರ ಮಾಡಿಕೊಳ್ಳಿ.

– ಅದಿತಿಮಾನಸ ಟಿ. ಎಸ್‌. 

Advertisement

Udayavani is now on Telegram. Click here to join our channel and stay updated with the latest news.

Next