Advertisement
ಹೊರಗಡೆ ದೋ ಎಂದು ಸುರಿಯುವ ಮಳೆ. ಅಗತ್ಯದ ಕೆಲಸಕ್ಕಾಗಿ ಮನೆ ಹೊರಗಡೆ ಕಾಲಿಡಬೇಕಾದ ಅನಿವಾರ್ಯ ಪರಿಸ್ಥಿತಿ. ಈ ವೇಳೆ ಎಲ್ಲರಿಗೂ ರಕ್ಷಾಕವಚವಾಗಿ ನಿಲ್ಲುವುದು ಕೊಡೆ ಅಥವಾ ರೈನ್‌ಕೋಟ್‌ಗಳು. ಉಳಿದ ದಿನಗಳಲ್ಲಿ ಮೂಲೆಗುಂಪಾಗುವ ಇವುಗಳು ಮಳೆಗಾಲ ಆರಂಭವಾದ ಕೂಡಲೇ ಹೊರ ಬಂದು ಎಲ್ಲೆಡೆ ರಾರಾಜಿಸುತ್ತದೆ. ಇದರಂತೆ ಪ್ರತಿ ವರ್ಷ ಹೊಸ ಕೊಡೆ, ರೈನ್‌ಕೋಟ್‌ಗಳ ಮೇಲಿನ ಬೇಡಿಕೆ ಕೂಡ ಅಷ್ಟೇ ಹೆಚ್ಚುತ್ತದೆ. ಬಟ್ಟೆ, ಮೊಬೈಲ್ ಮೊದಲಾದ ವಸ್ತುಗಳಲ್ಲಿ ಹೊಸತನ ಹುಡುಕುವ ಜನರು ಕೊಡೆ, ರೈನ್‌ಕೋಟ್ ವಿಷಯದಲ್ಲೂ ಹೊಸತನ ಬಯಸುತ್ತಾರೆ ಎಂಬುದಕ್ಕೆ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ, ವಿಶಿಷ್ಟ ವಿನ್ಯಾಸ ಕೊಡೆಗಳೇ ಸಾಕ್ಷಿ.
ಪ್ರಸ್ತುತ ಮಾರುಕಟ್ಟೆಯಲ್ಲಿ ಪಾಕೆಟ್ ಅಂಬ್ರಲ್ಲಾ ಹಾಗೂ ಲಾಂಗ್ ಅಂಬ್ರಲ್ಲಾ ಹವಾ ಜೋರಾಗಿದೆ. ಪಾಕೆಟ್ ಅಂಬ್ರಲ್ಲಾ ಚಿಕ್ಕಗಾತ್ರದಾಗಿದ್ದು, ಕಿಸೆ ಒಳಗೆ ಇಟ್ಟು ಕೊಳ್ಳಬಹುದಾಗಿದೆ ಬ್ಯಾಗ್‌ನಲ್ಲಿ ಇರಿಸಲು ಸುಲಭ ಎಂಬ ಕಾರಣಕ್ಕಾಗಿ ಮಹಿಳೆಯರು ಈ ಕೊಡೆಗಳನ್ನು ಹೆಚ್ಚು ಕೊಂಡುಕೊಳ್ಳುತ್ತಾರೆ. ತ್ರಿ ಪೋಲ್ಡ್, ಡಬಲ್ ಲೇಯರ್ ಕೊಡೆಗಳಿಗೂ ಬೇಡಿಕೆ ಇದೆ.
Related Articles
ಕೊಡೆಗಳಲ್ಲಿ ನ್ಯೂಸ್ ಪೇಪರ್ ಪ್ರಿಂಟ್ ಇರುವ, ಬಣ್ಣ ಬಣ್ಣದ ಚಿತ್ರಗಳಿರುವ ಕೊಡೆಗಳನ್ನು ು ಕೇಳುತ್ತಾರೆ. ಕಳೆದ ಬಾರಿ ಬಂದ ವಿನ್ಯಾಸದ ಕೊಡೆಗಳು ಬೇಡ ಈ ಬಾರಿಯ ಲೇಟೆಸ್ಟ್ ಕೊಡೆಗಳನ್ನು ತೋರಿಸಿ ಎನ್ನುತ್ತಾರೆ. ಕಪ್ಪು ಬಣ್ಣದ ಕೊಡೆಗಳ ಕಾಲ ಹೋಗಿದೆ. ಈಗ ಬಣ್ಣದ ಕೊಡೆಗಳಿಗೆ ಬೇಡಿಕೆ ಹೆಚ್ಚು . ಅದರಲ್ಲೂ ವಿಭಿನ್ನತೆಯನ್ನು ಬಯಸುವ ಯುವಕರು ರಿವರ್ಸ್ ಫೋಲ್ಡಿಂಗ್ ಕೊಡೆಗಳನ್ನು ಕೇಳುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ 500ರೂ.ನಿಂದ 2,000ರೂ. ವರೆಗಿನ ವಿವಿಧ ಬ್ರ್ಯಾಂಡ್‌ಗಳ ಕೊಡೆ ಮಾರುಕಟ್ಟೆಯಲ್ಲಿದೆ ಎಂದು ಅಂಗಡಿ ಮಾಲಕರು ಹೇಳುತ್ತಾರೆ.
Advertisement
ರೈನ್ ಕೋಟ್‌ಗಳಿಗೆ ಮೊದಲ ಸ್ಥಾನರೈನ್ ಕೋಟ್‌ನಲ್ಲಿ ಹಲವಾರು ವಿನ್ಯಾಸಗಳಿರುತ್ತವೆ. ಯುವಕ , ಯುವತಿಯರು ಆಕರ್ಷಕ ವಿನ್ಯಾಸದ ರೈನ್‌ಕೋಟ್‌ಗಳನ್ನು ಖರೀದಿಸಿದರೇ, ಕೆಲಸಕ್ಕೆ ಹೋಗುವ ಪುರುಷರು, ಮಹಿಳೆಯರು ಸಿಂಪಲ್ ಆಗಿರುವ ವಿನ್ಯಾಸಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಪುರುಷರು ಹೆಚ್ಚಾಗಿ ಪ್ಯಾಂಟ್, ಶರ್ಟ್ ಖರೀದಿಸುತ್ತಾರೆ. ಮಕ್ಕಳು, ಮಹಿಳೆಯರು ಉದ್ದನೆಯ ರೈನ್‌ಕೋಟ್‌ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. . ಮಕ್ಕಳ ರೈನ್ ಕೋಟ್ 400ರೂ. ನಿಂದ 2,000ರೂ., ಮಹಿಳೆಯರ 800ರೂ.ನಿಂದ 3,500ರೂ., ಪುರುಷರ 900ರೂ.ನಿಂದ 4,000ರೂ. ವರೆಗಿನ ಬೆಲೆಯ ರೈನ್‌ಕೋಟ್ ಸದ್ಯ ಮಾರುಕಟ್ಟೆಯಲ್ಲಿದೆ. ಆನ್‌ಲೈನ್‌ಗಳಲ್ಲೂ ಸದ್ದು
ಮಾರುಕಟ್ಟೆಗಳಲ್ಲಿ ಮಾತ್ರವಲ್ಲದೆ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಲ್ಲೂ ಕೊಡೆ, ರೈನ್‌ಕೋಟ್ ಮಾರಾಟಗಳು ಜೋರಾಗಿವೆ. ಒಂದೊಂದು ವೆಬ್‌ಸೈಟ್‌ಗಳಲ್ಲಿ ಆಫರ್‌ಗಳಲ್ಲಿ ಕೊಡೆಗಳು ಲಭ್ಯವಿದೆ. ಮಾರುಕಟ್ಟೆಗಳಿಗೆ ಹೋಗಿ ಖರೀದಿಸಲು ಸಮಯ ಇಲ್ಲದವರು ಆನ್‌ಲೈನ್‌ಗಳಲ್ಲಿ ಆರ್ಡರ್ ಮಾಡಿ ಇರುವಲ್ಲಿ ರೈನ್‌ಕೋಟ್, ಕೊಡೆಗಳನ್ನು ತರಿಸಿಕೊಳ್ಳುತ್ತಾರೆ. ಪಾರದರ್ಶಕ ಆಕರ್ಷಕ
ಸಾಮಾನ್ಯವಾಗಿ ಕೊಡೆಗಳು ಕಪ್ಪು ಅಥವಾ ಬಣ್ಣಗಳಿಂದ ಕೂಡಿರುತ್ತವೆ. ಆದರೆ ಇತ್ತೀಚೆಗೆ ಪಾರದರ್ಶಕ ಕೊಡೆಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿವೆ. ಮಳೆಯ ಅಬ್ಬರ ಈ ಪಾರದರ್ಶಕಗಳಲ್ಲಿ ಸ್ಪಷ್ಟವಾಗಿ ಕಂಡರೆ, ರೈನ್‌ಕೋಟ್‌ಗಳಲ್ಲಿ ಜನರು ತೊಟ್ಟ ಬಟ್ಟೆಗಳು ಎದ್ದು ಕಾಣುತ್ತದೆ. ಇದರೊಂದಿಗೆ ಪಾಕೆಟ್‌ನಲ್ಲಿ ಇಡಬಹುದಾದ ಕೊಡೆಗಳು ಕೂಡ ಇಂದು ಯುವ ಜನತೆಯನ್ನು ಸೆಳೆಯುತ್ತಿವೆ. - ಪ್ರಜ್ಞಾ ಶೆಟ್ಟಿ