Advertisement

ಮಳೆ ನೀರು ಕೊಯ್ಲು ಅಭಿಯಾನ

02:24 PM Dec 03, 2021 | Team Udayavani |

ಕಲಬುರಗಿ: ಕೇಂದ್ರ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿಯ ನೆಹರು ಯುವ ಕೇಂದ್ರ ಕಲಬುರಗಿ ವತಿಯಿಂದ ಮಳೆ ನೀರು ಕೊಯ್ಲು ಅಭಿಯಾನಕ್ಕೆ ನೆಹರು ಯುವ ಕೇಂದ್ರದ ಕಚೇರಿಯಲ್ಲಿ ಚಾಲನೆ ನೀಡಲಾಯಿತು.

Advertisement

ಕೇಂದ್ರದ ಜಿಲ್ಲಾ ಯುವ ಅಧಿ ಕಾರಿ ಹರ್ಷಲ್‌ ಸಿದ್ದಾರ್ಥ ತಳಸ್ಕರ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಳೆಯ ಪ್ರತಿ ಹನಿಯೂ ಗಂಗಾ ಜಲವಾಗಿದೆ. ಇದರ ಸಂರಕ್ಷಣೆಯಿಂದಲೇ ನಮ್ಮ ಭವಿಷ್ಯ ಸುಖ ಸಮೃದ್ಧಿಗೆ ಕೊಂಡೊಯ್ಯುತ್ತದೆ. ನೀರನ್ನು ಅನಾವಶ್ಯಕವಾಗಿ ವ್ಯಯ ಮಾಡದೇ ಅದನ್ನು ಸರಿಯಾಗಿ ಬಳಸಬೇಕಿದೆ. ಪ್ರತಿ ಹನಿಯು ಕೂಡ ಮಹತ್ವದಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಮಳೆ ನೀರನ್ನು ನಾವೆಲ್ಲಾ ಒಂದೆಡೆ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಬೇಕಿದೆ ಎಂಬ ಸಂದೇಶ ನೀಡಿದರು.

ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಂಯೋಜನಾಧಿಕಾರಿ ಹಾಗೂ ಲೆಕ್ಕಾಧಿಕಾರಿಗಳಾದ ಸಿದ್ರಾಮಪ್ಪ ಮಾಳ, ರಾಜು ಅವರಾದ, ದೇವರಾಜ ಕನ್ನಡಿಗ, ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಕಾರ್ಯಕರ್ತರಾದ ಶಿವಶರಣ ಪರಪ್ಪಗೋಳ, ಭಾಗ್ಯಶ್ರೀ, ಸಂಜಯ್‌, ಕರಣ, ಅಂಬರೀಶ್‌, ಅರ್ಚನಾ, ಗೋಪಾಲ್‌, ಪ್ರಶಾಂತ, ಮಹೇಶಕುಮಾರ, ಕಿರಣ, ಮಾಣಿಕಮ್ಮ, ನಾಗರಾಜ, ಅತೀಕ್‌, ಅಂಬಿಕಾ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next