Advertisement

ಭತ್ತದ ಕೃಷಿಕರನ್ನು ಕಾಡಿದ ಮಳೆ ;ಬೆಳೆದು ನಿಂತ ಫ‌ಸಲುಕಟಾವಿಗೆ ಅಡ್ಡಿ

08:28 PM Oct 15, 2021 | Team Udayavani |

ಆಲಂಕಾರು: ಬೇಸಾಯದ ಆರಂಭದಲ್ಲಿ ಮಳೆ ತಡವಾದ ಪರಿಣಾಮ ನೇಜಿ ನಾಟಿ ಮಾಡಲು ಸಾಧ್ಯವಾಗದೆ ರೈತರು ಒತ್ತಡಕ್ಕೆ ಸಿಲುಕಿದ್ದರು. ಈಗ ಕೆಲವು ದಿನಗಳಲ್ಲಿ ಸುರಿದ ಮಳೆಯು ಬೆಳೆದು ನಿಂತ ಫ‌ಸಲು ಕಟಾವಿಗೆ ಅಡ್ಡಿ ಮಾಡಿತು. ಈ ರೀತಿಯ ಮಳೆ ಬಾರದೆ ಇರುತ್ತಿದ್ದರೆ ಕೆಲವು ಭಾಗದಲ್ಲಿ ಕಟಾವು ಕಾರ್ಯ ಮುಗಿಯುತ್ತಿತ್ತು.

Advertisement

ಸಂಜೆ ವೇಳೆ ಸುರಿದ ಮಳೆಯಿಂದಾಗಿ ಗದ್ದೆಯಲ್ಲೇ ಭತ್ತ ಮೊಳಕೆ ಒಡೆಯುವ ಹಂತವನ್ನು ತಲುಪಿತ್ತು. ಈ ನಡುವೆ ಕಾಡು ಪ್ರಾಣಿಯ ಹಾವಳಿಯೂ ಹೆಚ್ಚಿದೆ.

ಮನುಷ್ಯರೇ ಅನಿವಾರ್ಯ.
ಕೂಲಿ ಕಾರ್ಮಿಕರ ಕೊರತೆಯ ಪರಿಣಾಮ ಹೆಚ್ಚಿನ ಬೇಸಾಯ ಕೆಲಸ ಕಾರ್ಯಗಳು ಯಾಂತ್ರಿಕೃ ತವಾಗಿಯೇ ನಡೆಯುತ್ತಿದೆ. ಆದರೆ ಈ ಬಾರಿಯ ಪೈರು ಗಾಳಿ ಮಳೆಯಿಂದಾಗಿ ನೆಲಕಚ್ಚಿದ್ದರಿಂದ ಬಹುತೇಕ ಗದ್ದೆಗಳಲ್ಲಿ ಕಟಾವು ಯಂತ್ರದಲ್ಲಿ ಕಟಾವಿಗೆ ಕಷ್ಟವಾಗಿ ಮನುಷ್ಯರೇ ಅನಿ ವಾರ್ಯ ಎಂಬಂತಾಗಿದೆ ಎಂದು ಹೇಳಲಾಗುತ್ತಿದೆ.

ಅಂದು ಆರು ದಿವಸ ಈ ಬಾರಿ 12 ದಿವಸ
ಗದ್ದೆಗಳಿಗೆ ಯಾವುದೇ ಪ್ರಾಕೃತಿಕ ವಿಕೋಪ, ಕಾಡು ಪ್ರಾಣಿ ದಾಳಿಯಾಗದಿದ್ದರೆ ಕೇವಲ ಆರು ದಿನದಲ್ಲಿ ಕಟಾವು ಕಾರ್ಯ ಮುಗಿಯುತ್ತಿತ್ತು. ಯಂತ್ರದ ಮೂಲಕ ಕಟಾವಾದರೆ ಕೇವಲ 3 ಗಂಟೆಯಲ್ಲಿ ಎಲ್ಲವು ಮುಗಿಯುತ್ತಿತ್ತು. ಆದರೆ ಈ ಬಾರಿ ಯಂತ್ರ ಉಪಯೋಗಿಸುವ ಹಾಗಿಲ್ಲ. ಮನುಷ್ಯರ ಮೂಲಕವೆ ಕಟಾವು ಮಾಡಬೇಕಾಗುತ್ತದೆ. ಕಳೆದ ಬಾರಿಯ ತನಕ ಆರು ದಿನದಲ್ಲಿ ಮುಗಿಯುತ್ತಿದ್ದ ಕಟಾವು ಕಾರ್ಯಕ್ಕೆ ಈ ವರ್ಷ 12ದಿವಸ ಸಾಗುವುದರಲ್ಲಿ ಸಂಶಯವಿಲ್ಲ. ಆರು ದಿನದ ಕೂಲಿ ಕಾರ್ಮಿಕ ಸಂಬಳ ಹೆಚ್ಚುವರಿ ಹೊರೆಯಾಗಲಿದೆ ಎಂದು ಸಂತ್ರಸ್ತ ರೈತ ಉದಯ ಕುಮಾರ್‌ ಎಣ್ಣೆತ್ತೋಡಿ ಹೇಳುತ್ತಾರೆ.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 470 ಹೊಸ ಪ್ರಕರಣ ಪತ್ತೆ | 368 ಸೋಂಕಿತರು ಗುಣಮುಖ 

Advertisement

ಪರಿಶೀಲಿಸಿ ಪರಿಹಾರ
ಕಡಬ ಹೋಬಳಿಯ ವ್ಯಾಪ್ತಿಯಲ್ಲಿ 43 ಹೆಕ್ಟೇರ್‌ ಗದ್ದೆಯನ್ನು ಬೇಸಾಯ ಮಾಡಲಾಗಿದೆ. ನೆರೆ ನೀರಿನಿಂದಾಗಿ ಭತ್ತ ನಾಶವಾದ ಬಗ್ಗೆ ಯಾವುದೇ ಮನವಿ ನಮಗೆ ಬಂದಿಲ್ಲ. ಬೆಳೆ ನಷ್ಟದ ಬಗ್ಗೆ ಮಾಹಿತಿ ಬಂದಲ್ಲಿ ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಲಾಗುವುದು. ನಷ್ಟದ ಮಾಹಿತಿ ಯುಳ್ಳ ಅರ್ಜಿಯನ್ನು ತಹಶೀಲ್ದಾರರಿಗೆ ಸಲ್ಲಿಸಬೇಕು. ಅವರಿಂದ ಸೂಚನೆ ಬಂದ ತತ್‌ಕ್ಷಣ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೈರು ಯಾವ ಹಂತದಲ್ಲಿದೆ ಎಂದು ಪರಿಶೀಲಿಸಿ ನಷ್ಟದ ಪಟ್ಟಿಯನ್ನು ತಯಾರಿಸಲಾಗುವುದು. ಕಟಾವಿನ ಹಂತದಲ್ಲಿದ್ದರೆ ಇಳುವರಿಯ ಪ್ರಮಾಣವನ್ನು ಹೊಂದಿಕೊಂಡು ಪರಿಹಾರದ ಮೊತ್ತ ನೀಡಲಾಗುವುದು ಎಂದು ಕಡಬ ಸಹಾಯಕ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next