Advertisement

Rain: ಪುತ್ತೂರು, ಸುಳ್ಯ, ಬೆಳ್ಳಾರೆ: ಕೆಲವಡೆ ಹಾನಿ ಉಕ್ಕಿ ಹರಿದ ಗೌರಿ ಹೊಳೆ; ಸಂಚಾರ ಬಂದ್‌

01:42 AM Oct 07, 2024 | Team Udayavani |

ಪುತ್ತೂರು: ಪುತ್ತೂರು, ಸುಳ್ಯ ತಾಲೂಕಿನಲ್ಲಿ ರವಿವಾರ ಸಂಜೆ ದಿಢೀರ್‌ ಆಗಿ ಒಂದು ತಾಸು ಭಾರೀ ಮಳೆಯಾಗಿದ್ದು ಹೊಳೆ, ತೋಡು ಉಕ್ಕಿ ಹರಿಯಿತು.
ಸಂಜೆ 3.30ರಿಂದ 4.30ರ ತನಕ ಮಳೆ ಸುರಿಯಿತು. ಗುಡುಗು, ಮಿಂಚು, ಗಾಳಿಯೊಂದಿಗೆ ಅಬ್ಬರದ ಮಳೆಯಾಗಿದ್ದು ನೋಡ ನೋಡುತ್ತಿದ್ದಂತೆ ತೋಡು, ಹೊಳೆ ಉಕ್ಕಿ ಹರಿದಿದೆ. ಬೆಳ್ಳಾರೆ, ಸರ್ವೆ ಭಾಗದಲ್ಲಿ ಹರಿಯುವ ಗೌರಿ ಹೊಳೆಯಲ್ಲಿ ಏಕಾಏಕಿ ಪ್ರವಾಹದ ರೂಪದಲ್ಲಿ ನೀರು ಹರಿದಿದೆ. ಹೊಳೆ ತಟದ ಕೃಷಿ ತೋಟಗಳು ಜಲಾವೃತಗೊಂಡಿವೆ.

Advertisement

ಇನ್ನು ನಗರ ಹಾಗೂ ಗ್ರಾಮಾಂತರ ಪ್ರದೇಶದ ರಸ್ತೆಗಳ ಬದಿಯ ಚರಂಡಿಗಳಲ್ಲಿ ಮಳೆ ನೀರು ಉಕ್ಕಿ ರಸ್ತೆಯಲ್ಲೇ ಹರಿದಿದ್ದು ಅಪಾರ ಕಸ ಕಡ್ಡಿಗಳು ರಸ್ತೆಯಲ್ಲಿ ತುಂಬಿದೆ. ಪುತ್ತೂರು, ಸುಳ್ಯ ಭಾಗದಲ್ಲಿ ಗಾಳಿ ಮಳೆಯಿಂದ ಅಡಿಕೆ ತೋಟಕ್ಕೆ ಹಾನಿ ಆಗಿದೆ.

ರಸ್ತೆ ಸಂಚಾರ ಬಂದ್‌
ಗೌರಿ ಹೊಳೆ ಉಕ್ಕಿ ಹರಿದ ಪರಿಣಾಮ ಬೆಳ್ಳಾರೆ ಪೆರುವಾಜೆ ಸವಣೂರು ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತು. ಪೆರುವಾಜೆ ಗ್ರಾಮದ ಮಾಪ್ಲಮಜಲು ಬಳಿ ಹೊಳೆ ನೀರು ರಸ್ತೆಗೆ ನುಗ್ಗಿದ ಪರಿಣಾಮ ಸಂಚಾರಕ್ಕೆ ಪರದಾಡಬೇಕಾದ ಸ್ಥಿತಿ ಎದುರಾಯಿತು.

ಕಲಾಯಿ: ಸೋಲಾರ್‌ ಧರಾಶಾಯಿ
ಪುತ್ತೂರು: ಕೊಳ್ತಿಗೆ ಗ್ರಾಮದ ಕಲಾಯಿ ಬಳಿ ಮಹಾಬಲ ರೈ ಅವರ ಜಾಗದ ಸುತ್ತ ನಿರ್ಮಿಸಿದ ಮಣ್ಣಿನ ಗೋಡೆ ಒಡೆದು ಮನೆ ಅಂಗಳದಲ್ಲಿ ನಿರ್ಮಿಸಿದ ಅಡಿಕೆ ಒಣಗಿಸುವ ಸೋಲಾರ್‌ ಸಂಪೂರ್ಣ ಧರಾಶಾಹಿಯಾಗಿದೆ.

ಅಂಗಡಿಗೆ ನುಗ್ಗಿದ ಮಳೆ ನೀರು
ಅರಿಯಡ್ಕ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೌಡಿಚ್ಚಾರಿನ ಎಸ್‌. ಇಸ್ಮಾಯಿಲ್‌ ಹಾಜಿ ಅವರ ಜಿನಸು ಅಂಗಡಿಗೆ ನೀರು ನುಗ್ಗಿದ ಪರಿಣಾಮ ಅಂಗಡಿಯಲ್ಲಿದ್ದ ಸಾಮಗ್ರಿಗಳು, ಕಾಳು ಮೆಣಸು, ಅಡಿಕೆ ಮೊದಲಾದ ವಸ್ತುಗಳು ನೀರುಪಾಲಾಗಿದ್ದು

Advertisement

ಚಿಕನ್‌ ಸೆಂಟರ್‌ಗೆ ನುಗ್ಗಿದ ಮಳೆ ನೀರು
ಪೆರ್ಲಂಪಾಡಿ ಪೇಟೆಯಲ್ಲಿನ ಚಿಕನ್‌ ಸೆಂಟರ್‌ಗೆ ಮಳೆ ನೀರು ನುಗ್ಗಿ ನೂರಾರು ಕೋಳಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿದ ಘಟನೆ ನಡೆದಿದೆ.

ಬೆಳ್ಳಾರೆ: ಹೊಳೆಯಂತಾದ ರಸ್ತೆ
ಸುಳ್ಯ ತಾಲೂಕಿನ ಸುಳ್ಯ ನಗರ, ಬೆಳ್ಳಾರೆ ಸೇರಿದಂತೆ ತಾಲೂಕಿನಲ್ಲಿ ರವಿವಾರ ಅಪರಾಹ್ನ ಬಳಿಕ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.ಭಾರೀ ಮಳೆಗೆ ಬೆಳ್ಳಾರೆ ಪೇಟೆಯಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಳೆ ನೀರು, ಚರಂಡಿ ನೀರು ರಸ್ತೆಯಲ್ಲೇ ಹರಿದು ರಸ್ತೆ ತೋಡಿನಂತಾಗಿ ವಾಹನ ಸವಾರರು ಸಮಸ್ಯೆ ಅನುಭವಿಸಿದರು.

ಬೆಳ್ಳಾರೆಯ ಹೊಳೆಯಲ್ಲಿ ಭಾರೀ ನೀರು ಹರಿದು ನೇಲ್ಯಮಜಲು-ಕುರುಂಬುಡೇಡು ಸಂಪರ್ಕ ಸೇತುವೆ ಹಾನಿಯಾಗಿದೆ. ಕಳಂಜ ಗ್ರಾಮದ ಕೋಟೆಮುಂಡುಗಾರು ಎಂಬಲ್ಲಿ ರಸ್ತೆಗೆ ಮಳೆ ನೀರು ನುಗ್ಗಿ ಸಮಸ್ಯೆ ಉಂಟಾಯಿತು. ಬೆಳ್ಳಾರೆಯ ಗೌರಿ ಹೊಳೆ ಉಕ್ಕಿ ಹರಿದ ಪರಿಣಾಮ ಹೊಳೆ ನೀರು ರಸ್ತೆಗೆ ನುಗ್ಗಿ ಬೆಳ್ಳಾರೆ – ಸವಣೂರು ಸಂಪರ್ಕ ಕಡಿತಗೊಂಡಿತು. ಸುಳ್ಯ ನಗರ, ಸುಳ್ಯ ತಾಲೂಕಿನ ಜಾಲ್ಸೂರು, ಅರಂತೋಡು, ಸಂಪಾಜೆ, ಕೊಲ್ಲಮೊಗ್ರು, ಬೆಳ್ಳಾರೆ, ಕಲ್ಮಡ್ಕ ಎಡಮಂಗಲ ಪರಿಸದಲ್ಲಿ ಗುಡುಸಹಿತ ಧಾರಕಾರ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next