Advertisement
ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ಮಂಗಳೂರಿನ ಕೊಟ್ಟಾರಚೌಕಿ ಬಳಿಯ ಬಂಗ್ರಕೂಳೂರು ಒಳರಸ್ತೆಯಲ್ಲಿ ರಾಜಕಾಲುವೆ ತಡೆಗೋಡೆ ಕುಸಿದಿದೆ. ರಸ್ತೆಯೂ ಅಪಾಯದ ಸ್ಥಿತಿಯಲ್ಲಿದೆ.
ಹವಾಮಾನ ಇಲಾಖೆ
ಮುನ್ಸೂಚನೆ ಪ್ರಕಾರ ಕರಾವಳಿಯಲ್ಲಿ ಮಳೆ ಮತ್ತೆ ಬಿರುಸು ಪಡೆಯುವ ನಿರೀಕ್ಷೆ ಇದೆ. ಜು. 3, 4ರಂದು “ಎಲ್ಲೋ ಅಲರ್ಟ್’ ಘೋಷಿಸಲಾಗಿದ್ದು, ಜು. 5, 6ರಂದು “ಆರೆಂಜ್ ಅಲರ್ಟ್’ ಘೋಷಣೆ ಮಾಡಲಾಗಿದೆ.
Related Articles
ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದ್ದು, ಸೋಮವಾರ ತಡರಾತ್ರಿ ಧಾರಾಕಾರ ಮಳೆ ಸುರಿದಿದೆ. ಉಡುಪಿ, ಮಲ್ಪೆ, ಮಣಿಪಾಲ, ಕಾಪು, ಬ್ರಹ್ಮಾವರ ಭಾಗದಲ್ಲಿ ಬಿಸಿಲು ಮೋಡ ಕವಿದ ವಾತಾವರಣದ ನಡುವೆ ಬಿಟ್ಟುಬಿಟ್ಟು ನಿರಂತರ ಮಳೆಯಾಗಿದೆ.
Advertisement
ಕುಂದಾಪುರ ಹಾರ್ದಳ್ಳಿ ಮಂಡಳ್ಳಿ, ಕಾಪು ತಾಲೂಕಿನ ಉಳಿಯಾರಗೋಳಿ, ಕಾರ್ಕಳ ದುರ್ಗಾದಲ್ಲಿ ಆಗಾಗ್ಗೆ ಮಳೆ ಸುರಿದಿದ್ದು ಕೆಲವು ಮನೆಗಳಿಗೆ ಹಾನಿಯಾಗಿದೆ. ಕಾರ್ಕಳ 49.0, ಕುಂದಾಪುರ 59.8, ಉಡುಪಿ 52.2, ಬೈಂದೂರು 64.1, ಬ್ರಹ್ಮಾವರ 58.4, ಕಾಪು 55.1, ಹೆಬ್ರಿ58.3 ಮಿ. ಮೀ. ಮಳೆಯಾಗಿದ್ದು, 57.0 ಮಿ. ಮೀ. ಸರಾಸರಿ ಮಳೆಯಾಗಿದೆ.