ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಳೆದ ಒಂದು ಗಂಟೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್, ಮತ್ತಿಕಟ್ಟೆ, ನಿಡುವಾಳೆ, ಗುತ್ತಿ, ಭೈರಾಪುರ, ಕಂದೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆ ಅಬ್ಬರ ಕಂಡುಬಂದಿದೆ.
ಜನವರಿ ತಿಂಗಳಲ್ಲೇ ಮಳೆ ಕಂಡು ರೈತರು, ಬೆಳೆ ಬೆಳೆದ ಬೆಳೆಗಾರರು ಹೈರಾಣಾಗಿದ್ದಾರೆ. ಒಂದು ಕಡೆ ಸರಿಯಾಗಿ ಇಳುವರಿ ಸಿಗದ ಬೆಳೆಯಾದರೆ ಇನ್ನೊಂದು ಕಡೆ ಇದ್ದ ಅಲ್ಪ ಸ್ವಲ್ಪ ಬೆಲೆಯೂ ಅಕಾಲಿಕ ಮಳೆಯಿಂದ ಹಾನಿಯಾಗುವ ಸಂಭವ ಎದುರಾಗಿದೆ.
ಇದನ್ನೂ ಓದಿ: ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲು ತೂರಿದ ತಮಿಳುನಾಡು ಸಚಿವ ; ವೈರಲ್ ವಿಡಿಯೋ