Advertisement
ಅವರ ತೋಟದಲ್ಲಿರುವ ಕೋಳಿ ಫಾರ್ಮ್ನಿಂದ ಸಮೀಪದಲ್ಲಿರುವ ಬೋರ್‌ವೆಲ್, ಬಾವಿಗೆ ಮಳೆಕೊಯ್ಲು ಅಳವಡಿಸಲಾಗಿದೆ. ಕೋಳಿ ಫಾರ್ಮ್ನ ಮಾಡಿಗೆ ಅಳವಡಿಸಲಾದ ಶೀಟ್‌ನ ಎರಡು ಭಾಗಗಳಿಗೆ ಪೈಪ್ ಜೋಡಿಸಲಾಗಿದ್ದು, ಅಲ್ಲಿಗೆ ಬಿದ್ದ ಮಳೆ ನೀರು ಪೈಪ್ ಮೂಲಕ ಬಾವಿಗೆ ಹಾಗೂ ಬೋರ್‌ವೆಲ್ಗೆ ಹೋಗುತ್ತದೆ. ಬಾವಿಗೆ ಹೋಗುವ ಮಳೆ ನೀರನ್ನು ಫಿಲ್ಟರ್ ಮಾಡುವ ಉದ್ದೇಶದಿಂದ ಸಮೀಪದಲ್ಲಿ ಸಿಂಟೆಕ್ಸ್ ಇಟ್ಟು ಅದಕ್ಕೆ ಹೊಗೆ, ಜಲ್ಲಿಕಲ್ಲುಗಳನ್ನು ಹಾಕಲಾಗಿದೆ. ಮಳೆ ನೀರು ಶುದ್ಧಗೊಂಡು ಬಾವಿಗೆ ಹೋಗುತ್ತಿದೆ.ಬೇಸಗೆ ಕಾಲದಲ್ಲಿ ಬಾವಿ, ಬೋರ್‌ವೆಲ್ನಲ್ಲಿ ನೀರು ಬತ್ತುತ್ತಿದ್ದು, ತೋಟಗಳಿಗೆ ನೀರು ಬಿಡುವುದು ತುಂಬಾ ದುಸ್ತರವಾಗಿತ್ತು. ಅದಕ್ಕಾಗಿ ಮಳೆಕೊಯ್ಲು ಬಗ್ಗೆ ಮಾಹಿತಿ ಪಡೆದು ಅಳವಡಿಸಿದ್ದೇವೆ. ಇದಕ್ಕೆ ಸುಮಾರು 5,000 ರೂ. ವೆಚ್ಚ ತಗಲಿದೆ ಎಂದು ವಿಜಯ್ ಶೇಣವ ಹೇಳುತ್ತಾರೆ.
‘ಉದಯವಾಣಿ’ ಮಳೆಕೊಯ್ಲು ಅಭಿಯಾನದಿಂದ ಮಾಹಿತಿ ಪಡೆದುಕೊಂಡು ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಅವರ ಮಾರ್ಗದರ್ಶನದಲ್ಲಿ ಕಾವೂರು ಗಾಂಧಿ ನಗರದ ಮೊಹಮ್ಮದ್ ಹನೀಫ್ ಅವರು ತಮ್ಮ ಮನೆಯ ಅಂಗಳದಲ್ಲಿರುವ ಬೋರ್‌ವೆಲ್ಗೆ ಜಲ ಮರು ಪೂರಣ ವ್ಯವಸ್ಥೆ ಮಾಡಿದ್ದಾರೆ. ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ. ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000