ಸುಳ್ಯ / ಪುತ್ತೂರು : ಉಭಯ ತಾಲೂಕಿನಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಒಂದು ವಾರದಿಂದ ಮುಚ್ಚಿದ್ದ ಶಾಲೆ, ಕಾಲೇಜುಗಳು ಮಂಗಳವಾರದಿಂದ ಪುನರಾರಂಭಗೊಂಡಿವೆ.
ಸುಳ್ಯ ಮತ್ತು ಪುತ್ತೂರು ತಾಲೂಕಿನಲ್ಲಿ ಶಾಲಾ ಬಸ್, ಕೆಎಸ್‌ಆರ್‌ಟಿಸಿ ಬಸ್, ಆಟೋ-ರಿಕ್ಷಾಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.
ನವರಾತ್ರಿ ರಜೆ, ಬೇಸಗೆ ರಜೆ, ಕ್ರಿಸ್ಮಸ್ ರಜೆ ಹೀಗೆ ಶಾಲೆಗೆ ಹೋಗುವ ಮಕ್ಕಳಿಗೆ ಪ್ರತಿ ವರ್ಷ ಸರಣಿ ರಜೆಗಳು ಸಿಗುತ್ತವೆ. ಈ ಬಾರಿ ವರುಣನ ರುದ್ರ ಪ್ರತಾಪದ ಕಾರಣ ಆಗಸ್ಟ್ ತಿಂಗಳಲ್ಲಿ ಮಳೆಗಾಲದ ಸರಣಿ ರಜೆ ಎದುರಾಗಿದೆ. ಶಾಲಾ ಕಾಲೇಜು, ಪ.ಪೂ. ಮತ್ತು ಪದವಿ ಕಾಲೇಜಿನಲ್ಲಿ ಎಂದಿನಂತೆ ಪಾಠ ಪ್ರವಚನಗಳು ಆರಂಭವಾಗಿವೆ.
ಹೊರಜಿಲ್ಲೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು
ಸುಳ್ಯ ಮತ್ತು ಪುತ್ತೂರಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಕೇರಳ, ಕೊಡಗು ಭಾಗದ ವಿದ್ಯಾರ್ಥಿಗಳಿಗೆ ಪ್ರಾಕೃತಿಕ ವಿಕೋಪ ಅಡ್ಡಿ ಉಂಟು ಮಾಡಿರುವ ಕಾರಣ ಅವರ ಹಾಜರಾತಿ ಕಡಿಮೆ ಇತ್ತು.
Advertisement
ಶಾಲೆ ಪುನರಾರಂಭವಾದ ಹಿನ್ನೆಲೆಯಲ್ಲಿ ಮಕ್ಕಳು ಮತ್ತೆ ಶಾಲೆಗೆ ಹಾಜರಾಗಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳು ಮಂಗಳವಾರ ಶಾಲೆಯತ್ತ ಮುಖ ಮಾಡಿದ್ದರು.
Related Articles
ಸುಳ್ಯ ಮತ್ತು ಪುತ್ತೂರಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಕೇರಳ, ಕೊಡಗು ಭಾಗದ ವಿದ್ಯಾರ್ಥಿಗಳಿಗೆ ಪ್ರಾಕೃತಿಕ ವಿಕೋಪ ಅಡ್ಡಿ ಉಂಟು ಮಾಡಿರುವ ಕಾರಣ ಅವರ ಹಾಜರಾತಿ ಕಡಿಮೆ ಇತ್ತು.
Advertisement
ಶಾಲಾ ಮಕ್ಕಳ ಸುರಕ್ಷತೆ ಮತ್ತು ಪ್ರಯಾಣದ ಹಿತದೃಷ್ಟಿಯಿಂದ ಎಲ್ಲ ಶಾಲೆಗಳಲ್ಲಿ ಸ್ಕೂಲ್ ಕ್ಯಾಬ್ ಸೇಫ್ಟಿ ಕಮಿಟಿ ರಚಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಆ. 14 ಗಡುವಿನ ಕೊನೆ ದಿನವಾಗಿದೆ.
ಆ. 14ರೊಳಗೆ ಸಮಿತಿ ರಚಿಸದಿದ್ದರೆ ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಸುರಕ್ಷಾ ಸಮಿತಿ ರಚನೆ ಬಗ್ಗೆ ಕೈಗೊಂಡ ಕ್ರಮದ ಕುರಿತಂತೆ ಆ. 20ರೊಳಗೆ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸುವಂತೆ ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ಶಾಲಾ ಮಕ್ಕಳನ್ನು ಕರೆದೊಯ್ಯುವ ಖಾಸಗಿ ವಾಹನ ಹಾಗೂ ಮೋಟಾರು ಕ್ಯಾಬ್ ವಾಹನಗಳನ್ನು ಸ್ಕೂಲ್ ಕ್ಯಾಬ್ ಆಗಿ ಪರಿವರ್ತಿಸಲು 2013ರಲ್ಲಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಆದರೆ ಆದೇಶ ಜಾರಿಗೊಂಡು 6 ವರ್ಷವಾದರೂ ಸುರಕ್ಷತಾ ಸಮಿತಿ ರಚನೆ ಆಗಿಲ್ಲ. ಇದರಿಂದ ಖಾಸಗಿ ವಾಹನವು ಸ್ಕೂಲ್ ಕ್ಯಾಬ್ ಆಗಿಲ್ಲ. ಹೀಗಾಗಿ ಮಕ್ಕಳ ಸುರಕ್ಷತೆಗೆ ಆಪತ್ತು ಉಂಟಾಗುವ ಸಂಭವ ಇರುವ ಕಾರಣ ಕಡ್ಡಾಯ ಆದೇಶ ನೀಡಲಾಗಿದೆ.
ಸ್ಕೂಲ್ ಕ್ಯಾಬ್ ಸೇಫ್ಟಿ ಕಮಿಟಿ ಖಾಸಗಿ ವಾಹನಗಳ ಸುರಕ್ಷತೆ, ವಾಹನಗಳು ವಿಧಿಸುವ ಶುಲ್ಕ, ನಿಲುಗಡೆ ಸ್ಥಳ ಗುರುತಿಸುವಿಕೆ, ಅನುಮತಿ ಪತ್ರ, ವಾಹನ ಸಾಮರ್ಥ್ಯ ಪ್ರಮಾಣಪತ್ರ, ವಿಮೆ, ಮಾಲಿನ್ಯ ತಪಾಸಣ ಪ್ರಮಾಣ ಪತ್ರ, ಚಾಲನ ಪರವಾನಿಗೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಅಗ್ನಿ ನಿಯಂತ್ರಣ ಸಾಧನ ವ್ಯವಸ್ಥೆ ಮೊದಲಾದ ಬಗ್ಗೆ ಪರಿಶೀಲನೆ, ನಿಗಾ ವಹಿಸುವ ಜವಾಬ್ದಾರಿ ಹೊಂದಿದೆ.
ರಚನೆ ಗಡುವು ಇಂದಿಗೆ ಕೊನೆ
ಶಾಲಾ ಮಕ್ಕಳ ಸುರಕ್ಷತೆ ಮತ್ತು ಪ್ರಯಾಣದ ಹಿತದೃಷ್ಟಿಯಿಂದ ಎಲ್ಲ ಶಾಲೆಗಳಲ್ಲಿ ಸ್ಕೂಲ್ ಕ್ಯಾಬ್ ಸೇಫ್ಟಿ ಕಮಿಟಿ ರಚಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಆ. 14 ಗಡುವಿನ ಕೊನೆ ದಿನವಾಗಿದೆ. ಆ. 14ರೊಳಗೆ ಸಮಿತಿ ರಚಿಸದಿದ್ದರೆ ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಸುರಕ್ಷಾ ಸಮಿತಿ ರಚನೆ ಬಗ್ಗೆ ಕೈಗೊಂಡ ಕ್ರಮದ ಕುರಿತಂತೆ ಆ. 20ರೊಳಗೆ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸುವಂತೆ ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ಖಾಸಗಿ ವಾಹನ ಹಾಗೂ ಮೋಟಾರು ಕ್ಯಾಬ್ ವಾಹನಗಳನ್ನು ಸ್ಕೂಲ್ ಕ್ಯಾಬ್ ಆಗಿ ಪರಿವರ್ತಿಸಲು 2013ರಲ್ಲಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಆದರೆ ಆದೇಶ ಜಾರಿಗೊಂಡು 6 ವರ್ಷವಾದರೂ ಸುರಕ್ಷತಾ ಸಮಿತಿ ರಚನೆ ಆಗಿಲ್ಲ. ಇದರಿಂದ ಖಾಸಗಿ ವಾಹನವು ಸ್ಕೂಲ್ ಕ್ಯಾಬ್ ಆಗಿಲ್ಲ. ಹೀಗಾಗಿ ಮಕ್ಕಳ ಸುರಕ್ಷತೆಗೆ ಆಪತ್ತು ಉಂಟಾಗುವ ಸಂಭವ ಇರುವ ಕಾರಣ ಕಡ್ಡಾಯ ಆದೇಶ ನೀಡಲಾಗಿದೆ. ಸ್ಕೂಲ್ ಕ್ಯಾಬ್ ಸೇಫ್ಟಿ ಕಮಿಟಿ ಖಾಸಗಿ ವಾಹನಗಳ ಸುರಕ್ಷತೆ, ವಾಹನಗಳು ವಿಧಿಸುವ ಶುಲ್ಕ, ನಿಲುಗಡೆ ಸ್ಥಳ ಗುರುತಿಸುವಿಕೆ, ಅನುಮತಿ ಪತ್ರ, ವಾಹನ ಸಾಮರ್ಥ್ಯ ಪ್ರಮಾಣಪತ್ರ, ವಿಮೆ, ಮಾಲಿನ್ಯ ತಪಾಸಣ ಪ್ರಮಾಣ ಪತ್ರ, ಚಾಲನ ಪರವಾನಿಗೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಅಗ್ನಿ ನಿಯಂತ್ರಣ ಸಾಧನ ವ್ಯವಸ್ಥೆ ಮೊದಲಾದ ಬಗ್ಗೆ ಪರಿಶೀಲನೆ, ನಿಗಾ ವಹಿಸುವ ಜವಾಬ್ದಾರಿ ಹೊಂದಿದೆ.