Advertisement

ಮಳೆಗೆ ಹದಗೆಟ್ಟ ರಸ್ತೆ: ಸಂಚಾರಕ್ಕೆ ಅಡ್ಡಿ

04:12 PM Aug 09, 2022 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅನೇಕ ಗ್ರಾಮಗಳಲ್ಲಿ ರಸ್ತೆಗಳು ಹದಗೆಟ್ಟಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

Advertisement

ತಾಲೂಕಿನಲ್ಲಿ ಆರ್ಭಟದಿಂದ ಮಳೆಗೆ ಜನರು ತತ್ತರಿಸಿದ್ದಾರೆ. ರೈತರ ಹೊಲದಲ್ಲಿ ಬೆಳೆದು ನಿಂದ ಉದ್ದು, ಹೆಸರು, ತೊಗರಿ, ಸೋಯಾ, ಸಜ್ಜೆ, ಮೆಕ್ಕೆಜೋಳ ಅಲ್ಲದೆ ತರಕಾರಿ ಬೆಳೆಗಳು ಟೊಮ್ಯಾಟೋ, ಉಳ್ಳಾಗಡ್ಡಿ, ಅರಶಿಣ, ಶುಂಠಿ ಬೆಳೆಗಳು ನೀರಿನಲ್ಲಿ ಕೊಳೆಯುತ್ತಿವೆ. ಅನೇಕ ಗ್ರಾಮದಲ್ಲಿ ಹೆಸರು ಬೆಳೆ ಹೂವು ಕಾಯಿ ಆಗುತ್ತಿದೆ. ಆದರೆ ಮಳೆಯ ಬಿರುಸಾದ ಹನಿಗಳಿಂದ ಹೂವು ಉದುರಿ ಹೋಗುತ್ತಿದೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ ರೈತರ ಪರಿಸ್ಥಿತಿ.

ರವಿವಾರ ಮತ್ತು ಸೋಮವಾರ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೆಳದಂಡೆ ಮುಲ್ಲಾಮಾರಿ ಜಲಾಶಯ ಮತ್ತು ಚಂದ್ರಂಪಳ್ಳಿ ಜಲಾಶಯ ಸಂಪೂರ್ಣವಾಗಿ ತುಂಬಿ ತುಳುಕುತ್ತಿವೆ ಹೆಚ್ಚಿನ ಪ್ರಮಾಣದಲ್ಲಿ ನೀರು ಮುಲ್ಲಾಮಾರಿ ನದಿಗೆ ಹರಿದು ಬಿಡಲಾಗುತ್ತಿದೆ. ತಾಲೂಕಿನಲ್ಲಿ ಮಳೆ ಅಬ್ಬರಕೆ ರೈತರ ಕಂಗಾಲಾಗಿ ಹೋಗಿದ್ದಾರೆ. ಜನಜೀವನ ಅಸ್ತವ್ಯಸ್ಥವಾಗಿದೆ. ಅಲ್ಲದೆ ಸಣ್ಣ ನೀರಾವರಿ ಕೆರೆಗಳು ಭರ್ತಿಯಾಗಿ ಕೋಡಿಗಳ ಮೂಲಕ ನೀರು ಹರಿದು ಹೋಗುತ್ತಿವೆ. ನದಿ ಹಳ್ಳಕೊಳ್ಳಗಳು ರಭಸವಾಗಿ ಹರಿಯುತ್ತಿದೆ.

ತಾಲೂಕಿನಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ 213 ಮನೆಗಳು ಹಾನಿಯಾಗಿವೆ. 5 ಎತ್ತುಗಳು ಸಿಡಿಲಿಗೆ ಬಲಿಯಾಗಿವೆ. ಇಬ್ಬರು ಸಿಡಿಲಿಗೆ ಮೃತಪಟ್ಟಿದ್ದಾರೆ. 12,844 ಹೆಕ್ಟರ ಬೆಳೆ ಹಾನಿಯಾಗಿದೆ ಹಾಗೂ 17.1ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ತಹಶೀಲ್ದಾರ್‌ ಅಂಜುಮ ತಬಸುಮ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next