ಚಿತ್ರದುರ್ಗ: ಕೋಟೆನಾಡಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕೆಲ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.
ಸೋಮವಾರ ರಾತ್ರಿ ಪೂರ್ತಿ ಸುರಿದ ವರ್ಷಧಾರೆಗೆ ಈಗಾಗಲೇ ತುಂಬಿದ್ದ ಕೆರೆ ಕಟ್ಟೆಗಳು ಮತ್ತಷ್ಟು ಮೈದುಂಬಿಕೊಂಡಿವೆ.
ಹೊಸದುರ್ಗ ತಾಲೂಕಿನ ಕಂಠಾಪುರ ಗ್ರಾಮದಲ್ಲಿ ಪೂರ್ತಿ ನೀರು ನಿಂತಿದ್ದು ಹಲವು ಮನೆಗಳು ಜಲಾವೃತವಾಗಿವೆ. ಜಾನಕಲ್ ಕೆರೆ ಕೋಡಿ ಬಿದ್ದ ಪರಿಣಾಮ ಕಂಠಾಪುರ ಸಂಕಷ್ಟಕ್ಕೆ ಸಿಲುಕಿದೆ.
ಜಾನಕಲ್ ಹೊಸದುರ್ಗ ಸಂಪರ್ಕಿಸುವ ರಸ್ತೆಯಲ್ಲಿ ಕೂಡಾ ಭಾರೀ ನೀರು ಹರಿಯುತ್ತಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ಮತ್ತೊಂದೆಡೆ ವಾಣಿ ವಿಲಾಸ ಸಾಗರಕ್ಕೆ ಒಂದೇ ದಿನ ಹತ್ತು ಅಡಿ ನೀರು ಹೆಚ್ಚಾಗಿದೆ. ನಿನ್ನೆ ಬೆಳಗ್ಗೆ 70 ಅಡಿಯಿದ್ದ ವಿವಿ ಸಾಗರದ ನೀರಿನ ಮಟ್ಟ, ಇಂದು 79 ಅಡಿಗೆ ತಲುಪಿದೆ. ವೇದಾವತಿ ನದಿ ಮೈದುಂಬಿ ಹರಿಯುತ್ತಿದೆ.