ಮೂಡುಬಿದಿರೆ/ಮಂಗಳೂರು : ಶನಿವಾರ ರಾತ್ರಿ ಮೂಡುಬಿದಿರೆಯಲ್ಲಿ ದಿಢೀರ್‌ಆಗಿ ಮಳೆ ಸುರಿಯಿತು.
Advertisement
ಶ್ರೀ ವೆಂಕಟರಮಣ ಭಜನ ಮಂಡಳಿಯ ವಜ್ರಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ಅಖಂಡ ಭಜನ ಸಪ್ತಾಹ ಸಂದರ್ಭ, ಶನಿವಾರ ಶ್ರೀ ವೆಂಕಟರಮಣ ದೇವರ ಉತ್ಸವದ ಪೇಟೆ ಸವಾರಿ ನಡೆಯುತ್ತಿರುವಂತೆಯೇ ಮಳೆ ಸುರಿಯತೊಡಗಿತು.
ಕರಾವಳಿಯಲ್ಲಿ ಬೆಳಗ್ಗಿನ ವೇಳೆ ಕೆಲವು ಕಡೆಗಳಲ್ಲಿ ಚಳಿಯ ವಾತಾವರಣ ಇತ್ತು. ಬಳಿಕ ಬಿಸಿಲು ಮತ್ತು ಮೋಡದಿಂದ ಕೂಡಿತ್ತು. ಹವಾಮಾನ ಇಲಾಖೆ ಮಾಹಿತಿಯಂತೆ ಶನಿವಾರ 33.1 ಡಿ.ಸೆ. ಗರಿಷ್ಠ ಮತ್ತು 24 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.