Advertisement

ಮಡಿಕೇರಿ ತಾಲೂಕಿನ ವಿವಿಧೆಡೆ ಸಾಧಾರಣ ಮಳೆ

11:23 PM Mar 14, 2023 | Team Udayavani |

ಮಡಿಕೇರಿ: ಮಡಿಕೇರಿ ತಾಲೂಕಿನ ವಿವಿಧೆಡೆ ಮಂಗಳವಾರ ಸಾಧಾರಣ ಮಳೆಯಾಗಿದೆ. ನಾಪೋಕ್ಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಸುರಿದಿದೆ.

Advertisement

ಮರಗೋಡು, ಮದೆನಾಡು, ಬೆಟ್ಟಗೇರಿ, ಗಾಳಿಬೀಡು, ಭಾಗಮಂಡಲ ಮತ್ತಿತರೆಡೆ ಸಾಧಾರಣ ಮಳೆಯಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆ ಸುರಿದ ವರದಿಯಾಗಿದೆ. ಮಡಿಕೇರಿ ನಗರ ಮತ್ತು ಸೋಮವಾರಪೇಟೆ ಸುತ್ತಮುತ್ತ ತುಂತುರು ಮಳೆಯಾಗಿದ್ದು, ವಿರಾಜಪೇಟೆಯಲ್ಲಿ ಮೋಡ ಕವಿದ ವಾತಾವರಣವಿತ್ತು.

ಉತ್ತಮ ಮಳೆಯಾಗಿದ್ದರೆ ಕಾಳ್ಗಿಚ್ಚು ಶಮನಕ್ಕೆ ಮತ್ತು ಬೆಂಕಿಯಿಂದ ನಾಶವಾಗಿರುವ ಅರಣ್ಯ ಭಾಗಕ್ಕೆ ಸಹಕಾರಿಯಾಗುತ್ತಿತ್ತು. ಆದರೆ ನಿರೀಕ್ಷೆಯಷ್ಟು ಮಳೆಯಾಗದೆ ನಿರಾಶೆ ಮೂಡಿಸಿದೆ.
ನಾಪೋಕ್ಲು ವಿಭಾಗದಲ್ಲಿ ಸ್ವಲ್ಪ ಹೆಚ್ಚು ಮಳೆಯಾಗಿರುವುದರಿಂದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಕಾಫಿ ಮತ್ತು ಕರಿಮೆಣಸು ಕೊಯ್ಲು ಕಾರ್ಯ ಮುಗಿದಿದ್ದು, ಪ್ರಸ್ತುತ ಉತ್ತಮ ಮಳೆಯಾದರೆ ಮುಂದಿನ ವರ್ಷ ಉತ್ತಮ ಫ‌ಸಲನ್ನು ಪಡೆಯಲು ಸಾಧ್ಯವಾಗುತ್ತದೆ. ಮಳೆಯಾಗದಿದ್ದರೆ ನೀರಾವರಿ ಮೊರೆ ಹೋಗಬೇಕಾಗುತ್ತದೆ, ಇದರಿಂದ ಬೆಳೆಗಾರರು ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಕಾಫಿ ತೋಟಗಳೇ ಇರುವ ಪ್ರದೇಶ ಉತ್ತಮ ಮಳೆಯ ನಿರೀಕ್ಷೆಯಲ್ಲಿದೆ.

ಬಿಸಿಲಿನ ತಾಪಕ್ಕೆ ಕಾಳ್ಗಿಚ್ಚು ಏರ್ಪಟ್ಟು ಅರಣ್ಯ ಬೆಂಕಿಗಾಹುತಿಯಾಗುತ್ತಿದೆ. ಕಾಡಿನಲ್ಲಿ ನೀರಿನ ಕೊರತೆ ಉಂಟಾಗಿ ವನ್ಯಮೃಗಗಳು ಗ್ರಾಮೀಣ ಭಾಗದ ಕೆರೆಗಳನ್ನು ಹುಡುಕಿಕೊಂಡು ಬರುತ್ತಿವೆ. ಕಾವೇರಿ ನದಿಯಲ್ಲೂ ನೀರಿನ ಮಟ್ಟ ಕುಸಿದಿದೆ. ಈ ವೇಳೆಯಲ್ಲಿ ಮಳೆಯಾದರೆ ಉತ್ತಮ ಎನ್ನುವುದು ಕೃಷಿಕ ವರ್ಗದ ಅಭಿಪ್ರಾಯವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next