ಜಿಲ್ಲೆಯಲ್ಲಿ ದಿನವೂ 23 ರಿಂದ 34 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಿಂದಾಗಿ ಜನತೆ ಬಸವಳಿದಿದ್ದರು.
Advertisement
ಅತೀ ಬಿಸಿಲಿನಿಂದ ಮಕ್ಕಳು, ವಯಸ್ಸಾದವರು ಮನೆಯಿಂದ ಹೊರಗೆ ಸಹ ಬರುತ್ತಿರಲಿಲ್ಲ.ಕಾರವಾರ ಹಿಂದೆಂದು ಮಾರ್ಚ ತಿಂಗಳಲ್ಲಿ ಇಂಥ ಸುಡು ಬಿಸಿಲು ಕಂಡಿರಲಿಲ್ಲ.ಇದರ ಪರಿಣಾಮವೋ ಎಂಬಂತೆ ರಾತ್ರಿ 8 ರಿಂದ 8.40 ರವರೆಗೆ ಮಳೆ ಸುರಿಯುತ್ತಲೇ ಇತ್ತು. ಮಳೆ ಮುಂದುವರಿದಿದ್ದು, ಇಳೆ ತಂಪಾಯಿತು.
Related Articles
Advertisement
ಪರಿಣಾಮ ಹಳ್ಳಿಗಳಲ್ಲಿನ ಶಿಕ್ಷಕರು, ಮಕ್ಕಳು ಶಾಲೆಯಿಂದ ಮನೆ ಸೇರಲು ಒಂದು ತಾಸು ಕಾಯಬೇಕಾಯಿತು. ಉತ್ತರ ಕನ್ನಡದಲ್ಲಿ ಅತೀಹೆಚ್ಚು ತಾಪಮಾನ ದಾಖಲಾಗಿದ್ದು. ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಸಿಡಿಲಿಗೆ ತೆಂಗಿನ ಮರಕ್ಕೆ ಹಾನಿ :ಅಂಕೋಲಾದ ಹಡವ ಗ್ರಾಮದ ಬಲೀಂದ್ರ ಸುಕ್ರು ಗೌಡ ಎಂಬುವವರ ಮನೆಯ ಎರಡು ತೆಂಗಿನಮರಗಳು ಸಿಡಿಲಿನ ಆರ್ಭಟಕ್ಕೆ ಬೆಂಕಿ ಬಿದ್ದು ಸುಟ್ಟು ಹೋಗಿವೆ.