Advertisement

ನೀರಿನ ಹರಿವು ಇಳಿಮುಖ : ಘಟಪ್ರಭಾ ಪ್ರವಾಹ ಯಥಾಸ್ಥಿತಿ

09:47 PM Jul 28, 2021 | Team Udayavani |

ಮಹಾಲಿಂಗಪುರ: ಜುಲೈ 22ರಿಂದ 26 ರವರೆಗೆ ನಿರಂತರವಾಗಿ ಏರಿಕೆ ಕಂಡಿದ್ದ ಘಟಪ್ರಭಾ ನದಿಯ ಪ್ರವಾಹವು ಕಳೆದ ಎರಡು ದಿನಗಳಿಂದ ಇಳಿಮುಖವಾಗುತ್ತಿದೆ.

Advertisement

ಸಮೀಪದ ಹಳೆನಂದಗಾಂವ ಗ್ರಾಮದ ಗ್ರಾಮವು ಸಂಪೂರ್ಣ ನಡುಗಡ್ಡೆಯಾಗಿದೆ. ಅಲ್ಲಿನ 69 ಕುಟುಂಬಗಳನ್ನು ಹೊಸ ನಂದಗಾಂವ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ಕೆಲವು ಕುಟುಂಬಗಳು ಕಾಳಜಿ ಕೇಂದ್ರದಲ್ಲಿ , ಕೆಲವು ಕುಟುಂಬಗಳು ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ದಿನನಿತ್ಯ ಕಾಳಜಿ ಕೇಂದ್ರದಲ್ಲಿ 150 ಜನರಿಗೆ ಉಪಹಾರ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ನೊಡೆಲ್ ಅಧಿಕಾರಿ ಡಿ.ಬಿ.ಪಠಾಣ ತಿಳಿಸಿದ್ದಾರೆ.

ಢವಳೇಶ್ವರ ಗ್ರಾಮದ ಹತ್ತಿರವು ಘಟಪ್ರಭಾ ನದಿಯು ಅಲ್ಪ ಇಳಿಮುಖವಾಗಿದೆ. ಪ್ರವಾಹದಿಂದ ಢವಳೇಶ್ವರ ಗ್ರಾಮದ 273 ಕುಟುಂಬದವರು ಸ್ಥಳಾಂತರಗೊಂಡಿದ್ದರು. ಅದರಲ್ಲಿ 23  ಕುಟುಂಬಗಳು ಕಾಳಜಿ ಕೇಂದ್ರದಲ್ಲಿ, ಉಳಿದವರು ತೋಟಗಳಲ್ಲಿ, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದರು. ನದಿಯ ನೀರಿನ ಪ್ರವಾಹ ಕಡಿಮೆಯಾದ ಕಾರಣ ಕಾಳಜಿ ಕೇಂದ್ರದಲ್ಲಿನ ಜನರು ಗುರುವಾರ ತಮ್ಮ ಮನೆಗಳಿಗೆ ಮರಳಲಿದ್ದಾರೆ ಎಂದು ನೋಡಲ್ ಅಕಾರಿ ಎಚ್.ಎಸ್.ಚಿತ್ತರಗಿ ತಿಳಿಸಿದ್ದಾರೆ.

ಎಲ್ಲಾ ಸೇತುವೆಗಳು ಜಲಾವೃತ :

ಗೋಕಾಕ, ಢವಳೇಶ್ವರ, ನಂದಗಾಂವ, ಮಿರ್ಜಿ, ಜಾಲಿಬೇರಿ, ಚಿಂಚಖAಡಿ ಸೇರಿ ಘಟಪ್ರಭಾ ನದಿಗೆ ಇರುವ ಎಲ್ಲಾ ಸೇತುವೆಗಳು ಜಲಾವೃತವಾದ ಕಾರಣ ಈ ಭಾಗದ ಜನತೆಯು ಬೀಳಗಿ-ಗದ್ದನಕೇರಿ, ಬಾಗೇವಾಡಿ-ಹುಕ್ಕೇರಿ ಮಾರ್ಗಗಳಿಂದ ನೂರಾರು ಕೀಮಿ ಸುತ್ತುವರೆದು ಬೆಳಗಾವಿ ಜಿಲ್ಲೆಗೆ ಹೋಗುವಂತಾಗಿದೆ. ಅತಿ ಜರೂರ ಆಸ್ಪತ್ರೆ, ಸಂತ್ಯ ಸಂಸ್ಕಾರ, ಮದುವೆ ಸಮಾರಂಭಗಳಿಗೆ ಹೋಗಲೇ ಬೇಕಾದವರೂ ಸುತ್ತುವರೆದು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಬುಧವಾರ ಗೋಕಾಕ-ಲೋಳಸೂರ ಸೇತುವೆ ಹತ್ತಿರ ನೀರು ಇಳಿಮುಖವಾಗಿದೆ ಆದರೆ ರಸ್ತೆ ಹಾಳಾದ ಕಾರಣ ಇನ್ನು ಸಂಚಾರ ಪ್ರಾರಂಭವಾಗಿಲ್ಲ.

Advertisement

ನೀರಿನ ಹರಿವು ಇಳಿಮುಖ :

ಬುಧವಾರ ಸಂಜೆ 6 ರ ಮಾಹಿತಿಯಂತೆ ದುಪದಾಳ ಜಲಾಶಯಕ್ಕೆ ಹಿಡಕಲ್ ಜಲಾಶಯದಿಂದ ೮ ಸಾವಿರ್ ಕ್ಯೂಸೆಕ್, ಹಿರಣ್ಯಕೆಶಿ ನದಿಯಿಂದ ೧೧೫೦೦ ಸೇರಿ 16500 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಅದರಲ್ಲಿ 169995 ಕ್ಯೂಸೆಕ್ ಘಟಪ್ರಭಾ ನದಿಗೆ ಹಾಗೂ 2010 ಕ್ಯೂಸೆಕ್ ನೀರನ್ನು ಜಿಎಲ್‌ಬಿಸಿ ಕಾಲುವೆ ಹರಿಸಲಾಗುತ್ತಿದೆ. ದುಪದಾಳ ಜಲಾಶಯದಿಂದ 16995ಹಾಗೂ ಮಾರ್ಕಂಡೆಯ ಮತ್ತು ಬಳ್ಳಾರಿ ನಾಲಾ ಸೇರಿ ಸದ್ಯ ಗೋಕಾಕ ಹತ್ತಿರದಿಂದ ಘಟಪ್ರಭಾ ನದಿಗೆ ಸುಮಾರು 20 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಆದರೆ ನೆರೆಯ ಕೃಷ್ಣಾ ನದಿಯು ೪ ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚಿನ ನೀರಿನ ಹರಿವು ಇರುವ ಕಾರಣ, ಚಿಕ್ಕಸಂಗಮದಿಂದ ಕಲಾದಗಿ, ಮುಧೋಳ ತಾಲೂಕಿನ ಚಿಚಖಂಡಿ ಸೇತುವೆವರೆಗೂ ಕೃಷ್ಣಾ ನದಿಯ ಹಿನ್ನಿರನ ಒತ್ತಡ ಬಹಳ ಇರುವ ಕಾರಣ ಮುಧೋಳ ತಾಲೂಕಿನಲ್ಲಿನ ಪ್ರವಾಹ ಸ್ಥಿತಿಯು ಮುಂದುವರೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next