Advertisement
ಮಂಗಳೂರು ನಗರದಲ್ಲಿ ಸಂಜೆ 5 ಗಂಟೆ ವೇಳೆಗೆ ಧೂಳು ಮಿಶ್ರಿತ ಪ್ರಬಲ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿತ್ತು. ಕಳೆದ ಕೆಲ ದಿನಗಳಿಂದಬಿಸಿಲಿನ ಧಗೆಯಲ್ಲಿದ್ದ ಕರಾವಳಿಯಲ್ಲಿ ಮಂಗಳವಾರ ಸುರಿದ ಮಳೆಯಿಂದ ವಾತಾವರಣ ತಂಪಾಗಿದೆ. ವೇಣೂರು ಪರಿಸರದಲ್ಲಿ ಸಂಜೆ ಸುಮಾರು ಅರ್ಥ ತಾಸು ಉತ್ತಮ ಮಳೆ ಸುರಿಯಿತು. ಚರಂಡಿ ಬ್ಲಾಕ್ ಆದ ಕಾರಣ ಇಲ್ಲಿಯ
ಕಾಲೇಜು ರಸ್ತೆಯ ಮುಂಭಾಗದಲ್ಲಿನ ಅಂಗಡಿಗಳಿಗೆ ನೀರು ನುಗ್ಗಿತು. ನಾರಾವಿ ಹಾಗೂ ವೇಣೂರು ವ್ಯಾಪ್ತಿಯ ಕುರೊÉಟ್ಟು, ಪೆರ್ಮುಡ ಹಾಗೂ ಕಲ್ಲತ್ತಿ ಪ್ರದೇಶಗಳಲ್ಲಿ ವಿದ್ಯುತ್ ತಂತಿ ಮೇಲೆ ಮರ ಉರುಳಿ ಬಿದ್ದು ಸುಮಾರು 8ಕ್ಕೂ ಅಧಿಕ ಕಂಬಗಳು ದರಾಶಾಹಿಯಾಗಿವೆ.
ಬಂಟ್ವಾಳ: ತಾಲೂಕಿನ ಅಮಾrಡಿ ಗ್ರಾಮದ ಬೆದ್ರಗುಡ್ಡೆ ನಿವಾಸಿ ಮೋಹನ ಜೋಗಿ ಅವರ ಹಂಚಿನ ಛಾವಣಿಯ ಮನೆಗೆ ತೆಂಗಿನ ಮರಬಿದ್ದು ಮನೆ ಸಂಪೂರ್ಣ ಜಖಂ ಆಗಿದೆ. ಈ ಸಂದರ್ಭ ಪತ್ನಿ, ಮಕ್ಕಳು ಸೇರಿ ನಾಲ್ವರು ಮನೆಯಲ್ಲಿದ್ದರು. ಪುತ್ರಿಗೆ ತರಚು ಗಾಯಗಳಾಗಿವೆ. ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಗ್ರಾಮ ಲೆಕ್ಕಿಗ ಶಶಿಕುಮಾರ್ ಸ್ಥಳ ಮಹಜರು ಮಾಡಿ ತಿಳಿಸಿದ್ದಾರೆ. ತಹಶೀಲ್ದಾರ್ ಸಣ್ಣರಂಗಯ್ಯ ಸ್ಥಳಕ್ಕೆ ಭೇಟಿ ನೀಡಿದರು.
ಬಿರುಗಾಳಿಗೆ ಕೆಲವು ಅಂಗಡಿಗಳ ನಾಮಫಲಕ ಉದುರಿ ಬಿದ್ದಿವೆ. ಬಿರುಗಾಳಿಯಿಂದ ಪೊಳಲಿ ಕ್ಷೇತ್ರದ ಮುಂಭಾಗದ ಹಾಲ್ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ ಹಾಕಿದ್ದ ಶಾಮಿಯಾನದ ಕಂಬ ವಾಲಿದ್ದರಿಂದ ಒಂದು ಭಾಗ ಕುಸಿಯಿತಾದರೂ ಕೂಡಲೇ ಸ್ಥಳೀಯರು ತೆರವು ಮಾಡಿದರು.
Related Articles
Advertisement
ಕಡಬ: ಅಪಾರ ಹಾನಿಕಡಬ ಪರಿಸರದಲ್ಲಿ ಮಂಗಳವಾರ ಸಂಜೆ ಗಾಳಿ ಮಳೆಗೆ ಹಲವು ಮರಗಳು
ರಸ್ತೆಗುರುಳಿದ್ದು, ಅಪಾರ ಕೃಷಿ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಕಟ್ಟಡಗಳ ಮೇಲ್ಛಾವಣಿಯ ಸಿಮೆಂಟ್ ಶೀಟುಗಳು, ಅಂಗಡಿಯ ನಾಮಫಲಕಗಳು ಸೇರಿದಂತೆ ಹಲವು ಸೊತ್ತುಗಳು ನಾಶವಾಗಿವೆ. ಮರ್ಧಾಳದ ಚಾಕೋಟೆಕೆರೆ, ಅಳೇರಿ ಹಾಗೂ ಕೋಡಂದೂರಿನಲ್ಲಿ ಬೃಹತ್ ಗಾತ್ರದ ಮೂರು ಮರಗಳು ರಸ್ತೆಗುರುಳಿದ್ದರಿಂದ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆ¨ªಾರಿಯ ಸಂಚಾರದಲ್ಲಿ ಕೆಲಕಾಲ ತಡೆಯುಂಟಾಯಿತು. ಹಲವು ಮನೆಗಳ ಮೇಲ್ಛಾವಣಿಯ ಹಂಚು, ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಸಾವಿರಾರು ಅಡಿಕೆ ಮರಗಳು, ತೆಂಗು, ರಬ್ಬರ್ ಕೃಷಿ ನಾಶವಾಗಿವೆ. ಉಜಿರೆ, ಲಾೖಲ, ಧರ್ಮಸ್ಥಳ, ಸುರತ್ಕಲ್, ಹೊಸಂಗಡಿ, ಕೊಕ್ಕಡ, ಪುತ್ತೂರು, ಉಪ್ಪಿನಂಗಡಿ, ಹತ್ಯಡ್ಕ, ಪಟ್ರಮೆ, ನೆಲ್ಯಾಡಿ, ಪುಂಜಾಲಕಟ್ಟೆ, ಕಿನ್ನಿಗೋಳಿ, ಹಳೆಯಂಗಡಿ, ಮೂಡುಬಿದಿರೆ, ಸವಣೂರು, ಪಣಕ್ಕಜೆ ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ಜೋರಾದ ಗಾಳಿ ಮಳೆಗೆ ಜಿಲ್ಲೆಯ ಕೆಲವು ಕಡೆಗಳಲ್ಲಿ ವಿದ್ಯುತ್ ಕೈಕೊಟ್ಟಿತ್ತು. ಕೊಡಗಿನಲ್ಲಿ ಆಲಿಕಲ್ಲು ಮಳೆ; ಬೆಳೆ ಹಾನಿ
ಮಡಿಕೇರಿ/ಸೋಮವಾರಪೇಟೆ: ಕೊಡಗು ಜಿಲ್ಲೆಯ ವಿವಿಧೆಡೆ ಮಂಗಳವಾರ ಅಪರಾಹ್ನ ಗುಡುಗು, ಸಿಡಿಲು ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದ್ದು, ಕಾಫಿ ಬೆಳೆಗಾರರು ಹರ್ಷಗೊಂಡಿದ್ದಾರೆ. ಸೋಮವಾರಪೇಟೆಯಲ್ಲಿ ಆಲಿಕಲ್ಲು ಮಳೆಯಾಗಿದ್ದು, ನಾಟಿ ಮಾಡಿದ್ದ ಮೆಣಸಿನ ಗಿಡಗಳು ಹಾನಿಗೀಡಾಗಿ ಅಪಾರ ನಷ್ಟ ಸಂಭವಿಸಿದೆ. ಗಾಳಿಯ ರಭಸವೂ ಹೆಚ್ಚಾಗಿತ್ತು.