Advertisement

ರೈಲುಗಳಲ್ಲಿನ್ನು ಆಹಾರ ಭಾರೀ ದುಬಾರಿ

09:49 AM Nov 16, 2019 | Team Udayavani |

ಹೊಸದಿಲ್ಲಿ: ದುಬಾರಿ ದುನಿಯಾ ಇನ್ನಷ್ಟು ದುಬಾರಿಯಾಗಲಿದೆ. ಈಗ ರೈಲುಗಳಲ್ಲಿ ಕೊಡುವ ಆಹಾರದ ದರ ಏರಿಕೆಗೆ ರೈಲ್ವೇ ಇಲಾಖೆ ಮುಂದಾಗಿದೆ.

Advertisement

ಈ ಕುರಿತು ನ.14ರಂದು ಹೊರಡಿಸಿದ ಸುತ್ತೋಲೆಯಲ್ಲಿ ಹೇಳಲಾಗಿದೆ. ಆಹಾರದ ದರ ಏರಿಕೆ ರಾಜಧಾನಿ, ಶತಾಬ್ದಿ, ದುರಂತೋ, ಮೇಲ್‌/ಎಕ್ಸ್‌ಪ್ರೆಸ್‌ ರೈಲುಗಳಿಗೆ ಅನ್ವಯಿಸಲಿದೆ. ಮುಂದಿನ 15 ದಿನಗಳ ಬಳಿಕ ಹೊಸ ದರ ಅನ್ವಯಿಸಲಿದ್ದು, ಕಾಯ್ದಿರಿಸಿದ ಸೀಟುಗಳಿಗೂ ಅನ್ವಯವಾಗಲಿದೆ. ಹೊಸ ದರಗಳನ್ನು ರೈಲ್ವೇ ದರ ಸಮಿತಿಯ ತೀರ್ಮಾನದ ಮೇರೆಗೆ ಏರಿಸಲಾಗಿದೆ ಎಂದು ಹೇಲಾಗಿದೆ.

ದರ ಪಟ್ಟಿ ಹೀಗಿದೆ.
ರಾಜಧಾನಿ, ಶತಾಬ್ದಿ, ದುರಂತೋ ರೈಲುಗಳಲ್ಲಿ
ಬೆಳಗ್ಗಿನ ಚಹಾ
1 ಎ.ಸಿ. ಸೇವೆ ಮತ್ತು ಎಕ್ಸಿಕ್ಯೂಟಿವ್‌ ಚೇರ್‌ ಕಾರು: 35 ರೂ.
2 ಎಸಿ. 3 ಎ.ಸಿ. ಚೇರ್‌ ಕಾರ್‌: 20 ರೂ.
ದುರಂತೋ ರೈಲುಗಳ ಸ್ಲೀಪರ್ ಕೋಚ್‌: 15 ರೂ.

ಬೆಳಗ್ಗಿನ ತಿಂಡಿ
1 ಎಸಿ ಸೇವೆ, ಎಕ್ಸಿಕ್ಯೂಟಿವ್‌ ಕಾರುಗಳು: 140 ರೂ.
2 ಎಸಿ, 3 ಎಸಿ, ಚೇರ್‌ ಕಾರ್‌: 105 ರೂ.
ದುರಂತೋ ರೈಲುಗಳ
ಸ್ಲೀಪರ್ ಕೋಚ್‌: 65 ರೂ.

ಮಧ್ಯಾಹ್ನ/ರಾತ್ರಿ ಊಟ
1 ಎ.ಸಿ. ಸೇವೆ ಮತ್ತು ಎಕ್ಸಿಕ್ಯೂಟಿವ್‌ ಚೇರ್‌ ಕಾರು: 245 ರೂ.
2 ಎಸಿ. 3 ಎ.ಸಿ. ಚೇರ್‌ ಕಾರ್‌: 185 ರೂ.
ದುರಂತೋ ರೈಲುಗಳ ಸ್ಲೀಪರ್ ಕೋಚ್‌: 120 ರೂ.

Advertisement

ಸಂಜೆಯ ಚಹಾ
1 ಎ.ಸಿ. ಸೇವೆ ಮತ್ತು ಎಕ್ಸಿಕ್ಯೂಟಿವ್‌ ಚೇರ್‌ ಕಾರು: 140 ರೂ.
2 ಎಸಿ. 3 ಎ.ಸಿ. ಚೇರ್‌ ಕಾರ್‌: 90 ರೂ.
ದುರಂತೋ ರೈಲುಗಳಲ್ಲಿ ಸ್ಲೀಪರ್ ಕೋಚ್‌: 50 ರೂ.

Advertisement

Udayavani is now on Telegram. Click here to join our channel and stay updated with the latest news.

Next