Advertisement

ಮಡಿಕೇರಿಯ ರೈಲ್ವೇ ಟಿಕೆಟ್‌ ಬುಕ್ಕಿಂಗ್‌ ಸೆಂಟರ್‌ಗೆ ಬೀಗ!

09:09 AM Oct 12, 2022 | Team Udayavani |

ಮಡಿಕೇರಿ : ರಾಜ್ಯದ “ಹಳಿಗಳೇ ಇಲ್ಲದ ಜಿಲ್ಲೆ’ ಖ್ಯಾತಿಯ ಕೊಡಗಿನಲ್ಲಿ ಒಂದೂವರೆ ದಶಕ ಗಳಿಂದ ಇದ್ದ ಏಕೈಕ ನೈಋತ್ಯ ರೈಲ್ವೇ ಟಿಕೆಟ್‌ ಬುಕ್ಕಿಂಗ್‌ ಕೇಂದ್ರವನ್ನು ಯಾವುದೇ ಮಾಹಿತಿ ಇಲ್ಲದೆ ಮುಚ್ಚಲಾಗಿದೆ.

Advertisement

ರಾಷ್ಟ್ರದ ಸೇನೆಯಲ್ಲಿ ಕೊಡಗಿನ ಸಹಸ್ರಾರು ಮಂದಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರೆ, ಜಿಲ್ಲೆಯ ಕಾಫಿ ತೋಟಗಳಲ್ಲಿ ದುಡಿಯಲು ದೇಶದ ಮತ್ತು ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಮಂದಿ ಕಾರ್ಮಿಕರು ಬರುತ್ತಾರೆ. ಜಿಲ್ಲಾ ಕೇಂದ್ರ ಮಡಿಕೇರಿಯ ಹಳೇ ಖಾಸಗಿ ಬಸ್‌ ನಿಲ್ದಾಣದ ನಗರ ಸಭೆಯ ಮಳಿಗೆಯೊಂದರಲ್ಲಿ ಒಂದೂ ವರೆ ದಶಕಗಳ ಹಿಂದೆ ಈ ರೈಲ್ವೇ ಬುಕ್ಕಿಂಗ್‌ ಕೇಂದ್ರವನ್ನು ತೆರೆಯ ಲಾಗಿತ್ತು. 2018ರ ಪ್ರಾಕೃತಿಕ ವಿಕೋಪ, ತದನಂತರ 2019ರಿಂದ ಸುಮಾರು ಎರಡು ವರ್ಷಗಳ ಕಾಲ ಕೊರೊನಾ ಸಾಂಕ್ರಾಮಿಕದ ಹಂತದಲ್ಲಿ ಮುಚ್ಚಲ್ಪಟ್ಟ ಬುಕ್ಕಿಂಗ್‌ ಕೇಂದ್ರ ಇದುವರೆಗೂ ತೆರೆದಿಲ್ಲ.

ಕೊಡಗಿಗೆ ಸಮೀಪದ ರೈಲು ನಿಲ್ದಾಣಗಳೆಂದರೆ ಮೈಸೂರು, ಪುತ್ತೂರು, ಮಂಗಳೂರು ಮತ್ತು ಹಾಸನ. ಜಿಲ್ಲೆಯಿಂದ ಹೊರ ತೆರಳು ವವರು ಮತ್ತು ಬರುವವರು ಹೆಚ್ಚಾಗಿ ಮೈಸೂರನ್ನು ಅವಲಂಬಿಸುತ್ತಾರೆ. ಈ ಬುಕ್ಕಿಂಗ್‌ ಸೆಂಟರ್‌ನಲ್ಲಿ ಪ್ರತಿನಿತ್ಯ ಸರಾಸರಿ 2ರಿಂದ 4 ಲಕ್ಷ ರೂ. ವ್ಯವಹಾರ ನಡೆಯುತ್ತಿತ್ತು. ಆನ್‌ಲೈನ್‌ ವ್ಯವಸ್ಥೆ ಇದ್ದರೂ ಕಾರ್ಮಿಕರು ಇದನ್ನು ಬಳಸುವುದು ಅಷ್ಟಕ್ಕಷ್ಟೆ ಆಗಿರುವುದ ರಿಂದ ಸಮಸ್ಯೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ : ಭಾರತ ಜೋಡೋ ಯಾತ್ರೆ : ಚಳ್ಳಕೆರೆಯಿಂದ ಪಾದಯಾತ್ರೆ ಆರಂಭ, ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಥ್

Advertisement

Udayavani is now on Telegram. Click here to join our channel and stay updated with the latest news.

Next