Advertisement

15ರವರೆಗೂ ಕಾರ್ಮಿಕರಿಗೆ ರೈಲು ಸೇವೆ: ಆರ್‌.ಅಶೋಕ್‌

07:09 AM May 09, 2020 | mahesh |

ಬೆಂಗಳೂರು: ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಲು ಶುಕ್ರವಾರದಿಂದ ಮೇ 15 ರವರೆಗೂ ರೈಲು ಸೇವೆ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ
ಆರ್‌.ಅಶೋಕ್‌ ಹೇಳಿದ್ದಾರೆ.  ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ. ಸರ್ಕಾರ 16 ವಿಶೇಷ ರೈಲುಗಳನ್ನು ನಿಗದಿಪಡಿಸಿದ್ದು, ಉತ್ತರ ಭಾರತದ 11 ರಾಜ್ಯಗಳಿಗೆ ಕಾರ್ಮಿಕರನ್ನು ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಐದು ರಾಜ್ಯಗಳು ಮಾತ್ರ ತಮ್ಮ ಕಾರ್ಮಿಕರನ್ನು ಕಳುಹಿಸಿಕೊಡಲು ಅನುಮತಿ ನೀಡಿವೆ. ಉಳಿದ 6 ರಾಜ್ಯಗಳು ಇನ್ನೂ ಅನುಮತಿ ಕೊಟ್ಟಿಲ್ಲ . ಹೀಗಾಗಿ ರಾಜ್ಯ ಸರ್ಕಾರ ಕಾರ್ಮಿಕರನ್ನು ಬಲವಂತವಾಗಿ ಇಟ್ಟುಕೊಂಡಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಸಂಬಂಧ ಪಟ್ಟ ರಾಜ್ಯಗಳು ಅನುಮತಿ ನೀಡಿದ ತಕ್ಷಣ
ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

Advertisement

ಚಿತ್ರೀಕರಣಕ್ಕೆ ಅವಕಾಶವಿಲ್ಲ: ಕನ್ನಡ ಚಲನಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವಂತೆ ಚಲನಚಿತ್ರಗಳ ನಿರ್ಮಾಪಕರು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆದರೆ, ಚಿತ್ರೀಕರಣಕ್ಕೆ ಅವಕಾಶ ನೀಡಿಲ್ಲ ಕೇವಲ ಡಬ್ಬಿಂಗ್‌ ಮತ್ತು ಎಡಿಟಿಂಗ್‌ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ ಕೇವಲ ಐದು ಜನರನ್ನು ಮಾತ್ರ ಇಟ್ಟುಕೊಂಡು ಕೆಲಸ ಮಾಡುವಂತೆ
ಸೂಚಿಸಲಾಗಿದೆ ಎಂದು ಹೇಳಿದರು. ಇನ್ನು ಶುಕ್ರವಾರ ವಿರೋಧ ಪಕ್ಷಗಳ ನಾಯಕರು ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ
ಕೊರೊನಾ ಹರಡುವಿಕೆ ನಿಯಂತ್ರಣದಲ್ಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next