Advertisement

ಹರಿಹರ-ದೇವರಗುಡ್ಡ ಮಧ್ಯೆ ರೈಲ್ವೆ ಜೋಡು ಮಾರ್ಗ ಕಾರ್ಯಾರಂಭ

03:07 PM Jan 04, 2021 | Team Udayavani |

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಹರಿಹರ ಮತ್ತು ದೇವರಗುಡ್ಡ ನಿಲ್ದಾಣಗಳ ನಡುವೆ ಹೊಸದಾಗಿನಿರ್ಮಿಸಿದ 31ಕಿಮೀ ಜೋಡಿ ಹಳಿ ಮಾರ್ಗವನ್ನು ರವಿವಾರ ಅನುಷ್ಠಾನಗೊಳಿಸಲಾಯಿತು.

Advertisement

ಹರಿಹರ ಮತ್ತು ದೇವರಗುಡ್ಡ ನಿಲ್ದಾಣಗಳ ನಡುವಿನಜೋಡಿ ಹಳಿ ಮಾರ್ಗ ಹುಬ್ಬಳ್ಳಿ ಮತ್ತು ಚಿಕ್ಕಜಾಜೂರುನಡುವಿನ 190 ಕಿಮೀ ದ್ವಿಪಥೀಕರಣದ ಭಾಗವಾಗಿದೆ.ಈ ವಿಭಾಗದಲ್ಲಿ ಇಲ್ಲಿಯವರೆಗೆ 2018ರ ಅಕ್ಟೋಬರ್‌ನಲ್ಲಿಅನುಷ್ಠಾನಗೊಂಡ ಚಿಕ್ಕಜಾಜೂರು ತೋಳ ಹುಣಿಸೆನಡುವೆ 37 ಕಿಮೀ ಮತ್ತು ದಾವಣಗೆರೆ-ಹರಿಹರ ನಡುವೆ 2019ರ ನವೆಂಬರ್‌ನಲ್ಲಿ ಕಾರ್ಯಾರಂಭ ಮಾಡಿದ 13ಕಿಮೀ ಸೇರಿದಂತೆ 81ಕಿಮೀ ಅನುಷ್ಠಾನಗೊಳಿಸಲಾಗಿದೆ.ದಕ್ಷಿಣ ವೃತ್ತದ ರೈಲ್ವೆ ಸುರಕ್ಷತೆ ಆಯುಕ್ತರು (ಸಿಆರ್‌ಎಸ್‌) ಡಿ. 23ಮತ್ತು 24ರಂದು ಹರಿಹರ ಮತ್ತು ದೇವರಗುಡ್ಡ ನಿಲ್ದಾಣಗಳ ನಡುವೆ (31ಕಿಮೀ) ಹೊಸದಾಗಿ ಹಾಕಿದ ಜೋಡು ಮಾರ್ಗ ಪರಿಶೀಲನೆ ನಡೆಸಿದ್ದಾರೆ.

ಹರಿಹರ (141 ಮಾರ್ಗಗಳು)ದಲ್ಲಿ ಜ.2ರಂದು24 ಹೆಚ್ಚುವರಿ ಪಾಯಿಂಟ್‌ಗಳು ಮತ್ತು 33 ಹೊಸಟ್ರ್ಯಾಕ್‌ ಸರ್ಕ್ನೂಟ್‌ಗಳೊಂದಿಗೆ ಅಸ್ತಿತ್ವದಲ್ಲಿದ್ದ 5 ಹಳಿಸಾಲುಗಳನ್ನು 7 ಸಾಲುಗಳಾಗಿ ಪ್ರಮುಖ ಯಾರ್ಡ್ಮರುನವೀಕರಣ ಮತ್ತು ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ಬದಲಾವಣೆಯೊಂದಿಗೆ ಎರಡೂ ತುದಿಗಳಲ್ಲಿ ಜೋಡಿಹಳಿ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ.

ಹೆಚ್ಚುವರಿ ಹಳಿ ನಿರ್ಮಾಣ: ಹರಿಹರ ಯಾರ್ಡ್‌ ನಲ್ಲಿಒಂದು ಹೆಚ್ಚುವರಿ ಚಾಲನಾ ಹಳಿ ಮತ್ತು ಒಂದುಹೆಚ್ಚುವರಿ ಸ್ಥಿರ ಹಳಿ ಮತ್ತ ಎರಡು ಪೂರ್ಣ ಉದ್ದದಶಂಟಿಂಗ್‌ ನೆಕ್‌ಗಳನ್ನು ನಿರ್ಮಿಸಲಾಗಿದೆ. 2.5ಕಿಮೀಯಾರ್ಡ್‌ ಮರುನವೀಕರಣ ಮಾಡಲಾಗಿದೆ. ಒಟ್ಟು 46 ಪಾಯಿಂಟ್‌ಗಳನ್ನು ಅಳವಡಿಸಲಾಗಿದೆ.ದೇವರಗುಡ್ಡದಲ್ಲಿ ಎರಡು ಹೆಚ್ಚುವರಿ ಚಾಲನಾಹಳಿಗಳನ್ನು ಸೇರಿಸಲಾಗಿದೆ. ಕುಮಾರಪಟ್ಟಣಂ, ಚಳಗೇರಿ ಮತ್ತು ರಾಣಿಬೆನ್ನೂರಿನಲ್ಲಿ ತಲಾ ಒಂದು ಹೆಚ್ಚುವರಿ ಹಳಿನಿರ್ಮಿಸಲಾಗಿದೆ.

ಚಳಗೇರಿ ಯಾರ್ಡ್‌ನಲ್ಲಿ 450ಮೀ ಉದ್ದದ 2 ಹೊಸ ಪ್ಲಾಟ್‌ಫಾರ್ಮ್ಗಳು ಮತ್ತು ದೇವರಗುಡ್ಡಯಾರ್ಡ್‌ನಲ್ಲಿ 540 ಮೀ ಉದ್ದದ ಪ್ಲಾಟ್‌ಫಾರ್ಮ್ನಿರ್ಮಿಸಲಾಗಿದೆ. ಹರಿಹರದಲ್ಲಿ 170 ಮೀ ಉದ್ದದಎರಡು ಪ್ಲಾಟ್‌ಫಾರ್ಮ್ಗಳ ವಿಸ್ತರಣೆ, ಚಳಗೇರಿಯಲ್ಲಿ 120ಮೀ ಉದ್ದದ ಒಂದು ಪ್ಲಾಟ್‌ಫಾರ್ಮ್ ಮತ್ತುರಾಣಿಬೆನ್ನೂರಿನಲ್ಲಿ ತಲಾ 100ಮೀ ಉದ್ದದ ಎರಡುಪ್ಲಾಟ್‌ಫಾರ್ಮ್ಗಳನ್ನು ವಿಸ್ತರಿಸಲಾಗಿದೆ. ಟ್ರೋಲಿಗಳು/ಗಾಲಿ ಕುರ್ಚಿಗಳ ಚಲನೆಗಾಗಿ ಪ್ಲಾಟ್‌ಫಾರ್ಮ್ನ ಎರಡೂಬದಿಯಲ್ಲಿರುವ ಟ್ರಾಲಿ ಮಾರ್ಗವನ್ನು ಕಾಂಕ್ರೀಟ್‌ನಿಂದ ಸುಗಮಗೊಳಿಸಲಾಗಿದೆ. ವಿಭಾಗದಲ್ಲಿ ಆರ್‌ಒಬಿ/ಆರ್‌ಯುಬಿ ಕೆಲಸನಿರ್ಮಾಣದ ನಂತರ ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳನ್ನುಮುಚ್ಚಲಾಗಿದೆ. ಆರ್‌ಒಬಿ ನಿರ್ಮಿಸಿ ಲೆವೆಲ್‌ ಕ್ರಾಸಿಂಗ್‌ ಗೇಟ್‌-208 ಮತ್ತು 213 ಮುಚ್ಚಲಾಗಿದೆ. ಆರ್‌ಯುಬಿ ನಿರ್ಮಾಣದಿಂದ ಲೆವೆಲ್‌ ಕ್ರಾಸಿಂಗ್‌ ಗೇಟ್‌-219 ಮತ್ತು 221 ಮುಚ್ಚಲಾಗಿದೆ.

Advertisement

ಹಳಿ ದ್ವಿಗುಣಗೊಳಿಸುವ ಭಾಗವಾಗಿ ಸಾರ್ವಜನಿಕಬೇಡಿಕೆಗೆ ಅನುಗುಣವಾಗಿ ಲೆವೆಲ್‌ ಕ್ರಾಸಿಂಗ್‌ ಗೇಟ್‌ 77 ಮತ್ತು 82ರಲ್ಲಿ ಎರಡು ಹೊಸ ಆರ್‌ಯುಬಿಗಳನ್ನು ಸಹನಿರ್ಮಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚ 298ಕೋಟಿರೂ. ಆಗಿದ್ದು, ಇದರಲ್ಲಿ ತುಂಗಭದ್ರಾ ನದಿಯಲ್ಲಿನಿರ್ಮಿಸಲಾದ 16 ಸಾðéಬ್‌ನ ಸೇತುವೆ ಪ್ರಮುಖವಾಗಿದೆ.ವಿಭಾಗದ ಜೋಡಿಹಳಿ ಕೆಲಸವನ್ನು ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಕೆ.ಸಿ.ಸ್ವಾಮಿ ಯೋಜಿಸಿದ್ದರು. ಈ ಯೋಜನೆಯನ್ನು ಮುಖ್ಯಅಭಿಯಂತರ ನಾರಾಯಣ ರಾವ ಮತ್ತು ಮುಖ್ಯ ಸಂಕೇತ ಮತ್ತು ದೂರಸಂಪರ್ಕ ಅಭಿಯಂತ ಶಾಂತಿರಾಮ, ನಿರ್ಮಾಣ ಸಂಸ್ಥೆಯ ಇತರೆ ಅಧಿಕಾರಿಗಳು ದಕ್ಷವಾಗಿ ಕಾರ್ಯಗತಗೊಳಿಸಿದರು.

ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ ಅಗರವಾಲ ಅವರು ವಿಭಾಗದ ಅ ಧಿಕಾರಿಗಳು, ಸಿಬ್ಬಂದಿಯೊಂದಿಗೆ ಇಂಟರ್‌ಲಾಕ್‌ ಮಾಡುವ ಕಾರ್ಯಮೇಲ್ವಿಚಾರಣೆ ಮಾಡಿದರು. ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್‌ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next