ಹುಬ್ಬಳ್ಳಿ: ವಾಸ್ಕೋ-ಡ-ಗಾಮಾ- ಹೌರಾ ಅಮರಾವತಿ ಎಕ್ಸ್‌ಪ್ರೆಸ್‌ನ ಪ್ರಮುಖ ಲೋಕೊದ ಮುಂಭಾಗದ ಜೋಡಿ ಚಕ್ರಗಳು ದೂಧಸಾಗರ್ ಮತ್ತು ಕಾರಂಜೋಲ್ ನಡುವೆ ಬೆಳಗ್ಗೆ 8:56 ಗಂಟೆ ಸುಮಾರಿಗೆ ಹಳಿತಪ್ಪಿದ್ದು, ಪ್ರಯಾಣಿಕರೆಲ್ಲ ಸುರಕ್ಷಿತವಾಗಿದ್ದಾರೆ.
ಹಳಿ ತಪ್ಪಿದ ಬೋಗಿಗಳನ್ನು ಬೇರ್ಪಡಿಸಿ ಸುರಕ್ಷಿತವಾಗಿ ಕುಲೇಂ ಮತ್ತು ಹುಬ್ಬಳ್ಳಿ ಕಡೆಗೆ ಕರೆತರಲಾಗಿದೆ. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
Advertisement
ಪ್ರಯಾಣಿಕರಿಗೆ ನೀರು, ಉಪಹಾರ ಹಾಗೂ ಆಹಾರ ವ್ಯವಸ್ಥೆ ಮಾಡಲಾಯಿತು.