Advertisement

ರೈಲುಗಳಿಗೆ ಸಾಹಿತ್ಯ ಕೃತಿ ಹೆಸರು

08:10 AM Sep 03, 2017 | Harsha Rao |

ಹೊಸದಿಲ್ಲಿ : ಮಂಗಳೂರಿಂದ ಬೆಂಗಳೂರಿಗೆ ಸಂಚರಿಸುವ ರೈಲಿಗೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು ರಚಿಸಿದ “ಗಿಳಿವಿಂಡು’ ಕೃತಿಯ ಹೆಸರು ನಾಮಕರಣ

Advertisement

ಗೊಂಡರೂ ಅಚ್ಚರಿ ಏನಿಲ್ಲ. ಕೇಂದ್ರ ರೈಲ್ವೇ ಇಲಾಖೆ ಇಂಥ  ಒಂದು ಪ್ರಸ್ತಾವನೆಯನ್ನು ಹೊಂದಿದೆ.
ಅದೇನೆಂದರೆ ಆಯಾ ರಾಜ್ಯಗಳಲ್ಲಿ ಖ್ಯಾತಿ ಯನ್ನು ಪಡೆದಿ ರುವ ಸಾಹಿತಿಗಳು ರಚಿಸಿದ ಕೃತಿಗಳ ಹೆಸರನ್ನು ಪ್ರಮುಖ ರೈಲುಗಳಿಗೆ ಇರಿಸಿ, ಮರು ನಾಮಕರಣ ಮಾಡುವ ಉದ್ದೇಶ ಹೊಂದಿದೆ. ಇಷ್ಟು ಮಾತ್ರವಲ್ಲ ಅವರು ಯಾವ ಪ್ರದೇಶ ವನ್ನು ಪ್ರತಿನಿಧಿಸುತ್ತಿದ್ದರು ಎಂಬುದರ ವಿವರ ವನ್ನೂ ನೀಡಲಾಗುತ್ತದೆ. ಈ ಮೂಲಕ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಮತ್ತು ಅವರ ಕೃತಿಗಳ ವಿವರಗಳನ್ನು ನೀಡುವ ಉದ್ದೇಶ ಇದಾಗಿದೆ ಎಂದು ಕೇಂದ್ರ ರೈಲ್ವೇ ಖಾತೆ ಸಚಿವ ಸುರೇಶ್‌ ಪ್ರಭು ಹೇಳಿದ್ದಾರೆ. ಇದರ ಜತೆಗೆ ಸಾಂಸ್ಕೃತಿಕ ಪರಂ ಪರೆಯನ್ನು ಪರಿಚಯಿಸುವ ಉದ್ದೇಶ ವೂ ಇದರಲ್ಲಿದೆ ಎಂದು ಅವರು ಹೇಳಿದ್ದಾರೆ. 

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಪ್ರಶಸ್ತಿ ವಿಜೇತ ಕೃತಿಗಳು ಮತ್ತು ಲೇಖಕರ ವಿವರಗಳನ್ನು ಮೊತ್ತ ಮೊದಲಿಗೆ ಇಲಾಖೆ ಅಧಿಕಾರಿಗಳು ಸಂಗ್ರಹಿಸಲು ಆರಂಭಿಸಿದ್ದಾರೆ. ಈಗಷ್ಟೇ ಪೂರ್ವಭಾವಿ ಕೆಲಸಗಳು ಆರಂಭ ವಾಗಿವೆ ಎಂದಿದ್ದಾರೆ. 2014ರಲ್ಲಿ ಹಾಲಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ರೈಲುಗಳ ಮತ್ತು ನಿಲ್ದಾಣಗಳ ಹೆಸರನ್ನು ಈಗಾಗಲೇ ಬದಲಿಸಿದೆ.  ದೀನ್‌ದಯಾಳ್‌ ಉಪಾಧ್ಯಾಯ ಹೆಸರಿನಲ್ಲಿ ದೀನ್‌ ದಯಾಳು ಕೋಚ್‌ಗಳನ್ನು ಆರಂಭಿಸಲಾಗಿದೆ. ಆಜಮ್‌ಗಡ- ದಿಲ್ಲಿ ಎಕ್ಸ್‌ ಪ್ರಸ್‌ ರೈಲಿಗೆ ಉರ್ದು ಕವಿ ಕೈಫಿ ಅಜ್ಮಿ ಹೆಸರಿನಲ್ಲಿ ಕೈಫಿಯತ್‌ ಎಕ್ಸ್‌ಪ್ರೆಸ್‌ ಎಂದು ನಾಮ ಕರಣಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next