Advertisement

ರೈಲು ಪ‹ಯಾಣ ಅವಧಿ ಇಳಿಕೆ?

02:29 PM Nov 23, 2017 | Team Udayavani |

ಕುಂದಾಪುರ: ಎಲ್ಲವೂ ಅಂದುಕೊಂಡಂತೇ ಆದರೆ ಶ್ರವಣಬೆಳಗೊಳ ಮೂಲಕ ಸಂಚರಿಸುವ ಬೆಂಗಳೂರು-
ಕಾರವಾರ ರೈಲು ಫೆಬ್ರವರಿಯಿಂದ ಕಾರವಾರಕ್ಕೆ ಪ್ರಸ್ತಾವಿತ ಸಮಯಕ್ಕಿಂತಲೂ ಬೇಗ ತಲುಪಲಿದೆ.

Advertisement

ಪ್ರಸ್ತಾವಿತ ಸಮಯದಂತೆ ಬೆಂಗಳೂರಿನಿಂದ ಹೊರಡುವ ರೈಲು ಮಂಗಳೂರಿಗೆ 6 ಗಂಟೆಗೆ ತಲುಪಿದ್ದರೂ ಕಾರವಾರಕ್ಕೆ ಹೊರಡುವುದು 7 ಗಂಟೆ ಬಳಿಕ ಎಂದಿತ್ತು. ಆದರೆ ಮಂಗಳೂರಿನಲ್ಲಿ ಸುಮಾರು 15 ನಿಮಿಷದಷ್ಟೇ ನಿಲುಗಡೆ ಮಾಡಿ, ರೈಲನ್ನು ಬೇಗನೆ ಹೊರಡಿಸಲು ಪಾಲ್ಘಟ್‌ ವಿಭಾಗ ಈಗ ಕೊಂಕಣ ರೈಲ್ವೆಗೆ ಪ್ರಸ್ತಾವನೆ ಕಳಿಸಿದೆ. ಇದರಿಂದ ಬೆಳಗ್ಗೆ 11ರ ಸುಮಾರಿಗೆ ರೈಲು ಕಾರವಾರ ತಲುಪುವ ಸಾಧ್ಯತೆ ಇದೆ. ಪಾಲ್ಟಾಟ್‌ ವಿಭಾಗ ಕಳಿಸಿದ ಪ್ರಸ್ತಾವನೆಗೆ ಕೊಂಕಣ ರೈಲ್ವೆ ಸಕಾರಾತ್ಮಕವಾಗಿ ಸ್ಪಂದಿಸಿದಲ್ಲಿ ಕುಂದಾಪುರ, ಬೈಂದೂರು ಪ್ರಯಾಣಿಕರಿಗೆ 40 ನಿಮಿಷ ಪ್ರಯಾಣ ಅವಧಿ ಉಳಿತಾಯವಾಗಲಿದೆ.

ರೈಲು ಬೇಗ ಬಿಡಲು ಮನವಿ: ಶ್ರವಣಬೆಳಗೊಳ ಮಾರ್ಗದಲ್ಲಿ ಸಂಚರಿಸುವುದರಿಂದ 90 ಕಿ.ಮೀ. ದೂರ ಕಡಿಮೆಯಾದರೂ, ಫ್ಲಾಟ್‌ಫಾರಂ ಕೊರತೆ ಮುಂದಿಟ್ಟು ಕಾರವಾರ ರೈಲನ್ನು ಮಂಗಳೂರಿನಿಂದ ತಡವಾಗಿ ಹೊರಡಿಸಲು ಯೋಜಿಸಲಾಗಿತ್ತು. ಇದರಿಂದ ಕುಂದಾಪುರ-ಬೈಂದೂರು ಭಾಗದ ಪ್ರಯಾಣಿಕರಿಗೆ ತೊಂದರೆ ಆಗುವುದನ್ನು ಮನಗಂಡ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ದಕ್ಷಿಣ ರೈಲ್ವೆ ಮಹಾಪ್ರಬಂಧಕರು ಕೊಂಕಣ ರೈಲ್ವೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಸ್ತಾವನೆಗೆ ಪುರಸ್ಕಾರ ಸಿಕ್ಕಲ್ಲಿ ಕರಾವಳಿ ಜನತೆಗೆ ಸಾಕಷ್ಟು ಪ್ರಯೋಜನವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next